ಬ್ರಿಸ್ಬೇನ್, ಅ 30 (DaijiworldNews/DB): ಬ್ರಿಸ್ಬೇನ್ನ ಗಾಬ್ಬಾದಲ್ಲಿ ಇಂದು ನಡೆದ ಟಿ20 ವಿಶ್ವಕಪ್ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಬಾಂಗ್ಲಾ ಮತ್ತು ಜಿಂಬಾಬ್ವೆ ನಡುವೆ ನಡೆದ ಈ ಪಂದ್ಯದಲ್ಲಿ ಮೂರು ವಿಕೆಟ್ಗಳ ಅಂತರದಿಂದ ಬಾಂಗ್ಲಾದೇಶವು ಜಿಂಬಾಬ್ವೆಯನ್ನು ಪರಾಭವಗೊಳಿಸಿತು.
ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಿ 7 ವಿಕೆಟ್ ನಷ್ಟಕ್ಕೆ 150 ರನ್ ಕಲೆ ಹಾಕಿತು. ಇನ್ನು ಎಂಟು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಜಿಂಬಾಬ್ವೆ ತಂಡ ಸೋಲಿಗೆ ಶರಣಾಯಿತು. ಬಾಂಗ್ಲಾ ಆರಂಭಿಕ ಆಟಗಾರ ಶಂಟೋ ಅವರ ಅರ್ಧಶತಕದಿಂದಾಗಿ ಬಾಂಗ್ಲಾ ಗೆಲುವಿನ ಹಾದಿ ಸುಗಮವಾಯಿತು. 55 ಎಸೆತ ಆಡಿದ ಶಂಟೋ 71 ರನ್ ಗಳಿಸಲು ಶಕ್ತವಾದರೆ, ಉಳಿದಂತೆ ಅಫಿಫ್ ಹುಸೈನ್ 29 ರನ್, ಶಕೀಬ್ 23 ರನ್ ಕೆಲ ಹಾಕಿದರು. ಜಿಂಬಾಬ್ವೆ ತಂಡ ಆರಂಭದಿಂದಲೇ ಕಳಪೆ ಪ್ರದರ್ಶನ ನೀಡಿದ ಕಾರಣ ಗೆಲುವಿನ ಗುರಿ ಬೆನ್ನತ್ತಲು ಸಾಧ್ಯವಾಗಲಿಲ್ಲ. ಸೀನ್ ವಿಲಿಯಮ್ಸ್ 64 ರನ್, ರಿಯಾನ್ ಬುರ್ಲ್ 27 ರನ್ ಗಳಿ ಔಟಾದರು. ಕೊನೆಯ ಓವರ್ನಲ್ಲಿ ಗೆಲುವಿಗೆ 16 ರನ್ ಅಗತ್ಯವಿದ್ದರೂ ಅದನ್ನು ಪಡೆಯಲು ಸಾಧ್ಯವಾಗದಿದ್ದಾಗ ಬಾಂಗ್ಲಾ ಆಟಗಾರರು ಸಂಭ್ರಮಕ್ಕೆ ಮುಂದಡಿಯಿಟ್ಟರು. ಆದರೆ ಅಂಪೈರ್ ನೋ ಬಾಲ್ ನೀಡಿದರು.
ಬಾಂಗ್ಲಾ ವಿಕೆಟ್ ಕೀಪರ್ ನೂರುಲ್ ಔಟ್ ಮಾಡುವ ಅವಸರದಲ್ಲಿ ಸ್ಟಂಪ್ಗಿಂತ ಮುಂದೆ ಚೆಂಡು ಸಂಗ್ರಹಿಸಿ ಔಟ್ ಮಾಡಿದರು. ಇದು ನಿಯಮಬಾಹಿರ ಕ್ರಮವೆಂದು ಅಂಪೈರ್ ನೋಬಾಲ್ ನೀಡಿದರು. ಆ ಬಳಿಕ ಬ್ಲೆಸಿಂಗ್ ಮುಜರಬಾನಿ ಕೂಡಾ ರನ್ ಗಳಿಸಲು ವಿಫಲರಾಗಿ ಜಯ ಬಾಂಗ್ಲಾದ ಪಾಲಾಯಿತು.