ಬಾರ್ಬಡೊಸ್, ಫೆ 21(SM): ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ಹೊಸತೊಂದು ದಾಖಲೆ ಬರೆದಿದೆ. ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ್ದು, ದಾಖಲೆಯೊಂದನ್ನು ಸೃಷ್ಟಿಸಿದೆ.
ಕೆರಿಬಿಯನ್ ತಂಡ ನೀಡಿದ್ದ 361ರನ್ಗಳ ಬೃಹತ್ ಟಾರ್ಗೆಟನ್ನು ಇಂಗ್ಲೆಂಡ್ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದು, ಗೆಲುವಿನ ನಗೆ ಚೆಲ್ಲಿದೆ. ಇಂಗ್ಲೆಂಡ್ ತಂಡ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಚೇಸ್ ಮಾಡಿ ಗೆಲುವು ದಾಖಲಿಸಿರುವುದು.
361ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಜಾಸನ್ ರಾಯ್(123) ಹಾಗೂ ಜಾನಿ ಬೈರ್ಸ್ಟೋವ್(34) ತಂಡಕ್ಕೆ ಉತ್ತಮ ಬುನಾದಿ ಹಾಕಿದರು. ಜಾನಿ ವಿಕೆಟ್ ಉರುಳುತ್ತಿದ್ದಂತೆ ಮೈದಾನಕ್ಕಿಳಿದ ರೂಟ್ (102) ರಾಯ್ ಜತೆ ಸೇರಿ ಎದುರಾಳಿ ತಂಡದ ಬೌಲರ್ಸ್ಗಳ ಬೆವರಿಳಿಸಿದರು.
ಇದಾದ ಬಳಿಕ ಕಣಕ್ಕಿಳಿದ ಮಾರ್ಗನ್ ಕೂಡ 65ರನ್ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆಯದಾಗಿ ಸ್ಟೋಕ್ಸ್(20), ಬಟ್ಲರ್(4)ರನ್ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದರು. ತಂಡ 48.4 ಓವರ್ಗಳಲ್ಲಿ 4ವಿಕೆಟ್ ಕಳೆದುಕೊಂಡು 364ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ಕ್ರಿಸ್ ಗೇಲ್(135), ಹೊಪ್ಸ್(64) ನುರ್ಸೆ(25)ರನ್ಗಳ ನೇರವಿನಿಂದ 50 ಓವರ್ಗಳಲ್ಲಿ 8ವಿಕೆಟ್ ಕಳೆದುಕೊಂಡು 360ರನ್ ಗಳನ್ನು ಪೇರಿಸಿತು.