ವೆಲ್ಲಿಂಗ್ಟನ್, ನ 18 (DaijiworldNews/DB): ಭಾರೀ ಮಳೆಯಿಂದಾಗಿ ವೆಲ್ಲಿಂಗ್ಟನ್ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಇಂದು ನಡೆಯುವ 1ನೇ ಟಿ 20 ಪಂದ್ಯವನ್ನು ತಡವಾಗಿ ಆರಂಭಿಸಲಾಗುತ್ತಿದೆ.
ಪ್ರಸ್ತುತ ವೆಲ್ಲಿಂಗ್ಟನ್ನಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಪಂದ್ಯ ಆರಂಭ ತಡವಾಗಲಿದೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಇನ್ನು ಟಿ20 ವಿಶ್ವಕಪ್ 2022ನ ಸೆಮಿಫೈನಲ್ನಲ್ಲಿ ಹೊರ ಬಿದ್ದ ಬಳಿಕ ಭಾರತ ತಂಡ ಮತ್ತೆ ಮೈದಾನಕ್ಕಿಳಿಯಲು ಸಿದ್ದಗೊಂಡಿದ್ದು ಕೇನ್ ವಿಲಿಯಮ್ಸನ್ ಅವರ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ. ಭಾರತ ತಂಡವನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಇಬ್ಬರೂ ಟಿ20 ವಿಶ್ವಕಪ್ ನಂತರ ವಿರಾಮದಲ್ಲಿದ್ದು, ಹಾರ್ದಿಕ್ ಪಾಂಡ್ಯಾಗೆ ಜವಾಬ್ದಾರಿ ನೀಡಲಾಗಿದೆ. ಇನ್ನು ತಂಡಕ್ಕೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹಂಗಾಮಿ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಬಾರಿ ನ್ಯೂಜಿಲ್ಯಾಂಡ್ ತಂಡವು ಟಿ20 ಸರಣಿಗೆ ಮಾರ್ಟಿನ್ ಗಪ್ಟಿಲ್ ಮತ್ತು ಟ್ರೆಂಟ್ ಬೌಲ್ಟ್ ಅವರಂತಹ ಅನುಭವಿ ಆಟಗಾರರನ್ನು ಕೈಬಿಟ್ಟಿದೆ.