ನವದೆಹಲಿ, ನ 22 (DaijiworldNews/DB): ಫೋರ್ಚ್ಗಲ್ನ ಪ್ರಸಿದ್ದ ಫುಟ್ಬಾಲ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೊ ಕೇವಲ ಫುಟ್ಬಾಲ್ನಲ್ಲಿ ಮಾತ್ರವಲ್ಲ, ಸೋಶಿಯಲ್ ಮೀಡಿಯಾದಲ್ಲಿಯೂ ತಮ್ಮದೇ ಹವಾ ಸೃಷ್ಟಿಸಿಕೊಂಡಿದ್ದಾರೆ. ಸದ್ಯ 500 ಮಿಲಿಯನ್ ಅನುಯಾಯಿಗಳನ್ನು ಹೊಂದುವ ಮೂಲಕ, ಅನುಯಾಯಿಗಳ ಸಂಖ್ಯೆಯಲ್ಲಿ ವಿಶ್ವದ ಮೊದಲಿಗನಾಗಿ ಗಮನ ಸೆಳೆದಿದ್ದಾರೆ.
ಹೌದು ರೊನಾಲ್ಡೊ ಆಟಕ್ಕೆ ಮನಸೋಲದವರಿಲ್ಲ. ರೊನಾಲ್ಡೊ ಮೈದಾನಕ್ಕಿಳಿದರೆಂದರೆ ಘಟಾನುಘಟಿಗಳಿಗೂ ಸೋಲು ನಿಶ್ಚಿತ. ಇದೀಗ ಫಿಫಾ ವಿಶ್ವಕಪ್ಗೆ ಸಿದ್ದತೆ ಮಾಡಿಕೊಳ್ಳುತ್ತಿರುವ ರೊನಾಲ್ಡೊ ಸೋಶಿಯಲ್ ಮೀಡಿಯಾ ಫಾಲೋವರ್ಸ್ ವಿಷಯದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ರೊನಾಲ್ಡೊ ಫಾಲೋವರ್ಸ್ ಸಂಖ್ಯೆ 500 ಮಿಲಿಯನ್ ಆಗಿದ್ದು, ಸದ್ಯ ಇಡೀ ವಿಶ್ವದಲ್ಲಿ ಇಷ್ಟೊಂದು ಸಂಖ್ಯೆಯ ಅನುಯಾಯಿಗಳಿರುವವರು ಯಾರಿಲ್ಲ. ಹಾಗಾಗಿ ರೊನಾಲ್ಡೊ ಫುಟ್ಬಾಲ್ನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿಯೂ ಹೊಸ ದಾಖಲೆ ಬರೆದಿದ್ದಾರೆ. ಇನ್ನು ರೊನಾಲ್ಡೊ ಫಾಲೋ ಮಾಡುತ್ತಿರುವವರ ಸಂಖ್ಯೆ ಕೇವಲ 523. ಇನ್ನು ಟ್ವಿಟರ್ನಲ್ಲಿ 105 ಮಿಲಿಯನ್ ಫಾಲೋವರ್ಸ್ಗಳನ್ನು ರೊನಾಲ್ಡೊ ಹೊಂದಿದ್ದಾರೆ.
ಇನ್ನು ಇನ್ಸ್ಟಾಗ್ರಾಂನಲ್ಲಿ ರೊನಾಲ್ಡೊ ಬಳಿಕ ಹೆಚ್ಚು ಫಾಲೋವರ್ಗಳನ್ನು ಹೊಂದಿರುವವರೆಂದರೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ. ಇವರು 376 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಬಳಿಕದ ಸ್ಥಾನ ಭಾರತದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಗಿದ್ದು, ಕಿಂಗ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ 224 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.