ದೋಹಾ, ನ 23 (DaijiworldNews/SM): ಬುಧವಾರದಂದು ಇಲ್ಲಿನ ಖಲೀಫಾ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ನ ಇ ಗುಂಪಿನ ಪಂದ್ಯದಲ್ಲಿ ಜಪಾನ್ ತಂಡವು ನಾಲ್ಕು ಬಾರಿಯ ಚಾಂಪಿಯನ್ ಆಗಿರುವ ಜರ್ಮನಿ ತಂಡವನ್ನು 2-1 ಗೋಲುಗಳಿಂದ ಸೋಲಿಸಿದ ಪಾರುಪತ್ಯ ಮೆರೆದಿದೆ.
ಪಂದ್ಯದ ಮೊದಲಾರ್ಧದ ಕೊನೆಯಲ್ಲಿ ಜರ್ಮನಿ ಮುನ್ನಡೆಯಲ್ಲಿತ್ತು. ಆದರೆ, ಜಪಾನ್ ತಂಡ 75ನೇ ನಿಮಿಷ ಹಾಗೂ 83ನೇ ನಿಮಿಷದಲ್ಲಿ ಗೋಲು ಸಿಡಿಸುವ ಮೂಲಕ ತನ್ನ ಈವರೆಗಿನ ಅತ್ಯಂತ ಸ್ಮರಣೀಯ ಗೆಲುವು ದಾಖಲಿಸಿತು. ಈ ಎರಡೂ ಗೋಲುಗಳನ್ನು ಸೂಪರ್ ಸಬ್ಗಳಾದ ರಿಟ್ಸು ಡೋನ್ ಹಾಗೂ ಟಕುಮಾ ಅಸಾನೋ ಬಾರಿಸಿದರು.
57 ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಬಂದ ಟಕುಮಾ ಅಸಾನೊ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಪಂದ್ಯದ 33ನೇ ನಿಮಿಷದಲ್ಲಿ ಜಪಾನ್ನ ವಿಂಗ್ ಬ್ಯಾಕ್ ಡೇವಿಡ್ ರೌಮ್ ಅವರ ಮೇಲೆ ಜಪಾನ್ನ ಗೋಲ್ ಕೀಪರ್ ಶೈಚು ಗೊಂಡಾ ಫೌಲ್ ಮಾಡಿದ್ದ ಕಾರಣಕ್ಕೆ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಗುಂಡೋಗನ್ ಗೋಲು ಬಾರಿಸಿದ್ದರು.