ಮುಂಬೈ, ನ 28 (DaijiworldNews/MS): ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಕ್ರಿಕೆಟರ್ ಶೋಯಬ್ ಮಲಿಕ್ ಡೈವೋರ್ಸ್ ಆಗುತ್ತಿರುವುದು ಬಹುತೇಕ ಖಚಿತ ಎಂದು ವರದಿಯಾಗಿದೆ.
ವರಿಯ ಪ್ರಕಾರ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ. ದುಬೈನಲ್ಲಿ ಜತೆಯಾಗಿ ನಡೆಸುವ ಶೋಗೆ ಈಗಾಗಲೇ ಒಪ್ಪಂದವಾಗಿದ್ದು, ಕಾನೂನು ಸಮಸ್ಯೆ ಎದುರಾಗಬಹುದು ಎಂಬ ಕಾರಣಕ್ಕೆ ವಿಚ್ಛೇದನ ಬಗ್ಗೆ ತುಟಿ ಬಿಚ್ಚದೆ ಇಬ್ಬರೂ ಮೌನವಾಗಿದ್ದಾರೆ ಎನ್ನಲಾಗಿದೆ.
ಕಾರ್ಯಕ್ರಮದ ಒಪ್ಪಂದ ಮುಗಿದ ನಂತರವೇ ಇಬ್ಬರೂ ತಮ್ಮ ವಿಚ್ಛೇದನದ ಅಧಿಕೃತ ಘೋಷಣೆಯನ್ನು ಮಾಡಲು ಸಾಧ್ಯವಾಗುತ್ತದೆ.
ಪಾಕ್ ಮಾಡೆಲ್ ಆಯೇಶಾ ಒಮರ್ ಜೊತೆ ಶೋಯೆಬ್ ಮಲಿಕ್ ಕ್ಲೋಸ್ ಆಗಿರುವುದೇ ಇದಕ್ಕೆ ಕಾರಣ ಎಂಬ ವದಂತಿ ಹರಡಿದೆ