ವೆಸ್ಟ್ ಇಂಡೀಸ್, ಫೆ 28(SM): ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಹಲವು ದಾಖಲೆಗಳನ್ನು ಬರೆಯುತ್ತಿದೆ. ಈ ಹಿಂದಿನ ಪಂದ್ಯದಲ್ಲಿ ಅತ್ಯಧಿಕ ಹೆಚ್ಚು ರನ್ ಚೇಸಿಂಗ್ ದಾಖಲೆ ಸೃಷ್ಠಿಸಿರುವ ಸರಣಿಯ ಬುಧವಾರದ ಪಂದ್ಯದಲ್ಲಿ ಮತ್ತೊಂದು ದಾಖಲೆ ಸೃಷ್ಠಿಯಾಗಿದೆ. ಪಂದ್ಯವೊಂದರಲ್ಲೇ ಅತೀ ಹೆಚ್ಚು ಸಿಕ್ಸರ್ ಗಳನ್ನು ಸಿಡಿಸಿರುವ ದಾಖಲೆ ಕೂಡ ಇದೇ ಸರಣಿಯಲ್ಲಿ ಸೃಷ್ಟಿಯಾಗಿದೆ.
ಆ ಮೂಲಕ ಈ ಹಿಂದೆ ಭಾರತ ಮತ್ತು ಆಸ್ಟ್ರೇಲಿಯಾ ಹೆಸರಿಗಿದ್ದ ದಾಖಲೆ ಕೂಡಾ ಬ್ರೇಕ್ ಆಗಿದೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಈ ದಾಖಲೆ ಅಳಿಸಿಹೋಗಿದೆ. ಸೇಂಟ್ ಜಾರ್ಜ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ
2013 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ 7ನೇ ಏಕದಿನ ಪಂದ್ಯದಲ್ಲಿ ಎರಡೂ ತಂಡಗಳು ಸೇರಿ ಒಟ್ಟು 38 ಸಿಕ್ಸರ್ ಸಿಡಿಸಿದ್ದವು. ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಚೊಚ್ಚಲ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದರು. ಈ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಅಟಗಾರರು ತಲಾ 19ರಂತೆ ಸಿಕ್ಸರ್ ಗಳನ್ನು ಸಿಡಿಸಿದ್ದರು.
ಇನ್ನು ಬುಧವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ವಿಂಡೀಸ್ ಆಟಗಾರರು ಒಟ್ಟಾರೆ 46 ಸಿಕ್ಸ್ ಸಿಡಿಸಿದ್ದಾರೆ. ವಿಂಡೀಸ್ ಆಟಗಾರರೇ 22 ಸಿಕ್ಸರ್ ಗಳನ್ನು ಸಿಡಿಸಿದ್ದರೆ, ಇಂಗ್ಲೆಂಡ್ ಆಟಗಾರರು 24 ಸಿಕ್ಸ್ ಸಿಡಿಸಿ ವಿಕ್ರಮ ಮೆರೆದಿದ್ದಾರೆ.