ನವದೆಹಲಿ, ಮಾ 05(SM): ಭಾರತದಲ್ಲಿ ನಡೆದ ಶೂಟಿಂಗ್ ವಿಶ್ವಕಪ್ ವೇಳೆ ಪಾಕಿಸ್ತಾನದ ಶೂಟರ್ಗಳಿಗೆ ವೀಸಾ ನಿರಾಕರಣೆ ಮಾಡಿರುವುದು ಭಾರತಕ್ಕೆ ಮುಳುವಾಗಿ ಪರಿಣಮಿಸಿದಂತಿದೆ. ಪಾಕ್ ಆಟಗಾರರ ವೀಸಾ ನಿರಾಕರಣ ಮಾಡಿದ್ದಕ್ಕೆ ಜಾಗತಿಕವಾಗಿ ಎಲ್ಲಾ ದೇಶದ ಫೆಡರೇಶನ್ ಗಳು ಭಾರತವನ್ನು ದೂರ ಇಡಬೇಕೆಂದು ವಿಶ್ವ ಕುಸ್ತಿ ಒಕ್ಕೂಟ ತಿಳಿಸಿದೆ.
ಇತ್ತೀಚೆಗೆ ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಬಾಂಬ್ ದಾಳಿಯಲ್ಲಿ 40ಕ್ಕೂ ಹೆಚ್ಚ ಭಾರತೀಯ ಸಿಆರ್ಪಿಎಫ್ ಯೋಧರು ಮೃತಪಟ್ಟ ಹಿನ್ನಲೆ ಪಾಕ್ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪಾಕಿಸ್ತಾನದೊಂದಿಗೆ ಯಾವುದೇ ವ್ಯವಹಾರ ನಡೆಸಬಾರದೆಂದು ಭಾರತದಲ್ಲಿ ಕೂಗು ಜೋರಾಗಿತ್ತು. ಇದೇ ಕಾರಣದಿಂದ ಭಾರತ ಪಾಕಿಸ್ತಾನದ ಶೂಟರ್ಗಳಿಗೆ ವೀಸಾ ನಿರಾಕರಿಸಿತ್ತು.
ಈ ನಿರ್ಧಾರದ ಬೆನ್ನಲ್ಲೇ ಅಂತಾರಾಷ್ಟ್ರೀಯ ಒಲಂಪಿಕ್ ಒಕ್ಕೂಟ ಭಾರತದಲ್ಲಿ ಯಾವುದೇ ಕ್ರೀಡಾಕೂಟ ಆಯೋಜನೆ ಮಾಡಲು ಅನುಮತಿ ನೀಡಬಾರದು ಎಂಬುದರ ಬಗ್ಗೆ ಚರ್ಚೆ ಕೂಡ ನಡೆಸಿತ್ತು. ಇದೀಗ ವಿಶ್ವ ಕುಸ್ತಿ ಒಕ್ಕೂಟ ತನ್ನ ನಿರ್ಧಾರ ಪ್ರಕಟಿಸಿದ್ದು, ತನ್ನ ಅಸೋಸಿಯೇಟ್ ರಾಷ್ಟ್ರಗಳಿಗೆ ಭಾರತದಿಂದ ದೂರ ಉಳಿಯುವಂತೆ ತಿಳಿಸಿದೆ ಎನ್ನಲಾಗಿದೆ.