ಮುಂಬೈ, ಡಿ 13 ( DaijiworldNews/MS): ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ನಟಿ ಅಥಿಯಾ ಶೆಟ್ಟಿ ಮತ್ತು ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ.
ಪಿಂಕ್ ವಿಲ್ಲಾ ಮಾಧ್ಯಮದ ವರದಿಯ ಪ್ರಕಾರ, 2023ರ ಜ.21ರಿಂದ ಜ.23 ರವರೆಗೆ ನಡೆಯಲಿದೆ. ಮುಂಬೈನ ಸುನೀಲ್ ಖಂಡಾಲಾ ಬಂಗಲೆಯಲ್ಲಿ ಮದುವೆ ಕಾರ್ಯಕ್ರಮಗಳು ನಡೆಯಲಿದ್ದು, ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಈ ತಿಂಗಳ ಅಂತ್ಯದೊಳಗೆ ಸ್ಟಾರ್ ಜೋಡಿ, ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಆಮಂತ್ರಣವನ್ನು ಕಳುಹಿಸಲಿದ್ದಾರೆ ಎಂದು ವರದಿಯಾಗಿದೆ.
ಈ ದಿನಾಂಕಗಳ ಬಗ್ಗೆ ಪ್ರಸ್ತುತ ಇಬ್ಬರಲ್ಲಿ ಯಾರೂ ದೃಢೀಕರಣವನ್ನು ನೀಡಿಲ್ಲ. ಇನ್ನೂ, ರಾಹುಲ್ ಮದುವೆ ವಿಚಾರವನ್ನು ಬಿಸಿಸಿಐಗೆ ತಿಳಿಸಿದ್ದಾರೆ. ದಕ್ಷಿಣ ಭಾರತದ ಅದ್ಧೂರಿ ವಿವಾಹ ಸಂಪ್ರದಾಯದ ಪ್ರಕಾರ ಮದುವೆಯಾಗಲಿದ್ದು, ಇದರಲ್ಲಿ ಅರಿಶಿನ, ಮೆಹಂದಿ, ಸಂಗೀತ್ ಎಲ್ಲವೂ ಇರಲಿದೆ ಎಂದು ಹೇಳಲಾಗುತ್ತಿದೆ.