ಗುವಾಹಟಿ, ಜ 10 (DaijiworldNews/SM): ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಭಾರತ ಗೆದ್ದು ಬೀಗಿದೆ.
ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ತಂಡ 8 ವಿಕೆಟ್ ಕಳೆದುಕೊಂಡು 306 ರನ್ ಗಳಿಸಲಷ್ಟೇ ಶಕ್ತವಾಗಿದ್ದು 67 ರನ್ ಗಳಿಗೆ ಭಾರತಕ್ಕೆ ಶರಣಾಗಿದೆ.
ಅಂದಹಾಗೆ, ಏಕದಿನದಲ್ಲಿ 45ನೇ ಶತಕ ಪೂರೈಸಿದ ವಿರಾಟ್ ಕೊಹ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರಲ್ಲದೆ ರೋಹಿತ್ ಶರ್ಮಾ (83) ಮತ್ತು ಶುಭಮನ್ ಗಿಲ್ (70) ಕೂಡ ಅಬ್ಬರದ ಇನ್ನಿಂಗ್ಸ್ ಆಡಿದರು. ಅವರ ಅದ್ಭುತ ಬ್ಯಾಟಿಂಗ್ನಿಂದಾಗಿ ಶ್ರೀಲಂಕಾಗೆ 374 ರನ್ಗಳ ಬೃಹತ್ ಗುರಿ ನೀಡಲು ಸಾಧ್ಯವಾಯಿತು. ಶ್ರೀಲಂಕಾ ಪರ ಪಾತುಮ್ ನಿಶಾಂಕ 72 ರನ್ ಪೇರಿಸಿದರು. ಇನ್ನು ನಾಯಕ ದಶುನ್ ಶಂಕಾ ಅತ್ಯಂತ ಅದ್ಭುತ ಇನ್ನಿಂಗ್ಸ್ ಆಡಿ ಅಜೇಯ ಶತಕ ಬಾರಿಸಿ ಗೆಲುವಿಗಾಗಿ ಶತಪ್ರಯತ್ನ ಮಾಡಿದ್ದರು.
ಭಾರತದ ಪರ ಉಮ್ರಾನ್ ಮಲಿಕ್ ಗರಿಷ್ಠ 3 ವಿಕೆಟ್ ಪಡೆದ್ದರೆ ಮೊಹಮ್ಮದ್ ಸಿರಾಜ್ ಕೂಡ ಮಾರಕ ಬೌಲಿಂಗ್ ಮಾಡಿ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಭಾರತ ಏಕದಿನ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.