ನವದೆಹಲಿ, ಜ 20 (DaijiworldNews/DB): ಚೇತನ್ ಶರ್ಮಾ ನೇತೃತ್ವದ ಅಖಿಲ ಭಾರತ ಆಯ್ಕೆ ಮಿತಿಯು ಬ್ಯಾಟರ್ ಸರ್ಫರಾಝ್ ಖಾನ್ ಅವರನ್ನು ಅವಗಣಿಸಿದ್ದಕ್ಕಾಗಿ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕಿಡಿ ಕಾರಿದ್ದಾರೆ. ಸ್ಲಿಮ್ ಮತ್ತು ಟ್ರಿಮ್ ಆಗಿ ಇರುವವರೇ ತಂಡದಲ್ಲಿ ಇರಬೇಕೆಂದಾದರೆ ಆಯ್ಕೆದಾರರು ಮಾಡೆಲ್ಗಳನ್ನೇ ಆಯ್ಕೆ ಮಾಡಿಕೊಳ್ಳಬಹುದು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಸರ್ಫರಾಜ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಆದಾಗ್ಯೂ ಅವರನ್ನು ಆಸ್ಟೇಲಿಯಾ ವಿರುದ್ದ ಟೆಸ್ಟ್ ಸರಣಿಗೆ ಆಯ್ಕೆ ಸಮಿತಿ ಕೈ ಬಿಟ್ಟಿದೆ. ಆಯ್ಕೆ ಸಮಿತಿಯ ಅವಗಣನೆಗೆ ಒಳಗಾದ ನಂತರವೂ ರಣಜಿ ಟ್ರೋಫಿಯ ಮೊದಲ ಇನ್ನಿಂಗ್ಸ್ನಲ್ಲಿ ಮುಂಬೈ ಪರ ಸರ್ಫರಾಜ್ ಶತಕ ಸಿಡಿಸಿದ್ದರು.
ಇದೀಗ ಸರ್ಫರಾಜ್ ಅವಗಣನೆಗೆ ಒಳಗಾಗಿರುವುದಕ್ಕೆ ಆಯ್ಕೆ ಸಮಿತಿ ವಿರುದ್ದ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಲಿಮ್ ಮತ್ತು ಟ್ರಿಮ್ ಆಗಿರುವ ಆಟಗಾರರೇ ಆಯ್ಕೆ ಸಮಿತಿಗೆ ಬೇಕು ಎಂದಾದರೆ ಅವರು ಫ್ಯಾಶನ್ ಶೋಗೆ ಹೋಗಿ, ಅಲ್ಲಿ ಮಾಡೆಲ್ಗಳನ್ನು ಆಯ್ಕೆ ಮಾಡುವುದು ಉತ್ತಮ. ಮಾಡೆಲ್ಗಳ ಕೈಯಲ್ಲಿ ಬ್ಯಾಟ್, ಬಾಲ್ ನೀಡಿ ತಂಡಕ್ಕೆ ಸೇರಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಆಯ್ಕೆ ಸಮಿತಿಯು ಆಟಗಾರರ ರನ್ ಮತ್ತು ವಿಕೆಟ್ಗಳತ್ತ ಗಮನ ನೀಡಬೇಕು. ಗಾತ್ರದತ್ತ ಗಮನ ನೀಡುವುದು ಸರಿಯಲ್ಲ. ಎಲ್ಲಾ ಆಕಾರ, ಗಾತ್ರಗಳ ಆಟಗಾರರು ನಮ್ಮಲ್ಲಿದ್ದಾರೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಯ್ಕೆ ಸಮಿತಿಗೆ ಕಿವಿ ಮಾತು ಹೇಳಿದ್ದಾರೆ.