ಅಹಮದಾಬಾದ್, ಜ 27 (DaijiworldNews/DB): ಟೀಂ ಇಂಡಿಯಾದಲ್ಲಿ ಈಗ ಮದುವೆಗಳದ್ದೇ ಸುದ್ದಿ. ಕೆಲ ದಿನಗಳ ಹಿಂದಷ್ಟೇ ಕೆ.ಎಲ್. ರಾಹುಲ್ ಅವರು ನಟಿ ಅಥಿಯಾ ಶೆಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಭಾರತ ತಂಡದ ಆಫ್ ಸ್ಪಿನ್ನರ್ ಅಕ್ಷರ್ ಪಟೇಲ್ ಅವರು ಸದ್ದಿಲ್ಲದೆ ಮದುವೆಯಾಗಿದ್ದಾರೆ.
ತಮ್ಮ ಬಹು ಕಾಲದ ಗೆಳತಿ, ಡಯೆಟಿಷಿಯನ್ ಆಗಿರುವ ಮೇಹಾ ಪಟೇಲ್ ಅವರನ್ನು ಜನವರಿ 26ರ ಗುರುವಾರ ವಡೋದರಲ್ಲಿ ಅಕ್ಷರ್ ವರಿಸಿದರು. ಆಪ್ತೇಷ್ಟರು ಹಾಗೂ ಬಂಧುಗಳ ಸಮ್ಮುಖದಲ್ಲಿ ಅಕ್ಷರ್-ಮೇಹಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾ ಮತ್ತು ಗುಜರಾತ್ನ ಕೆಲವು ಆಟಗಾರರು ಅಕ್ಷರ್ ವಿವಾಹದಲ್ಲಿ ಪಾಲ್ಗೊಂಡಿದ್ದರು.
ಬಹು ಕಾಲದ ಸ್ನೇಹಿತರಾಗಿದ್ದ ಅಕ್ಷರ್ ಮೇಹಾ, ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಿವಾಹದ ಹಿನ್ನೆಲೆಯಲ್ಲಿ ಭಾರತ-ನ್ಯೂಜಿಲ್ಯಾಂಡ್ ಸೀಮಿತ ಓವರ್ಗಳ ಸರಣಿಯಲ್ಲಿ ಅಕ್ಷರ್ ಪಾಲ್ಗೊಳ್ಳುವುದಿಲ್ಲ. ಇನ್ನು ಫೆಬ್ರವರಿಯಲ್ಲಿ ಮತ್ತೆ ವೃತ್ತಿ ಜೀವನಕ್ಕೆ ಮರಳಲಿದ್ದಾರೆ ಎನ್ನಲಾಗಿದೆ.