ದೆಹಲಿ, ಮಾ 12(SM): ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ವಿಕೆಟ್ ಕೀಪರ್ ರಿಷಭ್ ಪಂತ್ ಕಾರಣ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಒಂದು ಕ್ಯಾಚ್, 2 ಸ್ಟಂಪ್ ಔಟ್ಗಳನ್ನು ರಿಷಬ್ ಪಂತ್ ಮಿಸ್ ಮಾಡಿದ್ದರು. ಇದುವೇ ಸೋಲಿಗೆ ಕಾರಣ ಎಂದು ಅಬಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದರು.
ಆದರೆ ಪಂತ್ ಪರ ಅವರ ಕೋಚ್ ಬ್ಯಾಟ್ ಬೀಸಿದ್ದಾರೆ. 14 ವರ್ಷಗಳ ಹಿಂದೆ ಧೋನಿ ಕೂಡ ಕ್ಯಾಚ್ ಹಾಗೂ ಸ್ಟಂಪ್ ಗಳನ್ನು ಮಿಸ್ ಮಾಡಿದ್ದರು. ಆದರೆ ಈಗ ವಿಶ್ವ ಶ್ರೇಷ್ಠ ಕೀಪರ್ ಆಗಿದ್ದಾರೆ. ಹಾಗೆಯೇ ಪಂತ್ ಗೂ ಕಲಿತುಕೊಳ್ಳಲು ಅವಕಾಶ ನೀಡಿ ಎಂದು ಪಂತ್ ಅವರ ಕೋಚ್ ತಾರಕ್ ಸಿನ್ಹಾ ವಿನಂತಿಸಿಕೊಂಡಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಪಂದ್ಯ ನಿರ್ಣಾಯಕ ಹಂತ ತಲುಪಿತ್ತು. ಈ ಸಂದರ್ಭ ಕೆಲವರು ಗೆಲುವು ಭಾರತಕ್ಕೆ ಎಂದು ಲೆಕ್ಕಾಚಾರ ಹಾಕಿಕೊಂಡಿದ್ದರು.
ಆದರೆ, ಪಂತ್ ಆಸೀಸ್ ಗೆಲುವಿಗೆ ಕಾರಣರಾದ ಹ್ಯಾಂಡ್ಸ್ಕಾಂಬ್ ಹಾಗೂ ಟರ್ನರ್ರನ್ನು ಔಟ್ ಮಾಡಲು ಸಿಕ್ಕ ಅವಕಾಶವನ್ನು ಸುಲಭವಾಗಿ ಕೈಚೆಲ್ಲಿದರು. ಪರಿಣಾಮ 6 ಓವರ್ ಗಳಲ್ಲಿ 60 ಕ್ಕೂ ಹೆಚ್ಚು ರನ್ ಗಳನ್ನು ಸುಲಭವಾಗಿ ಚೇಸ್ ಮಾಡಲು ಆಸಿಸ್ ತಂಡಕ್ಕೆ ಸಾಧ್ಯವಾಯಿತು.
ಇದರ ಬಳಿಕ ಮೈದಾನದಲ್ಲಿ ಧೋನಿ.. ಧೋನಿ... ಎಂಬ ಘೋಷಣೆಗಳು ಅಭಿಮಾನಿಗಳಿಂದ ಕೇಳಿ ಬಂದವು. ಧೋನಿ ರೀತಿ ರನ್ಔಟ್ ಮಾಡಲು ಯತ್ನಿಸಿ ರನ್ ಬಿಟ್ಟುಕೊಟ್ಟಿದ್ದರಿಂದ ಪಂತ್ ಮೇಲೆ ಕೊಹ್ಲಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.