ಲಂಡನ್, ಫೆ. 12 (DaijiworldNews/SM): 2019ರ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್, ಎಲ್ಲ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
36 ವರ್ಷದ ಐರ್ಲೆಂಡ್ ಮೂಲದ ಬ್ಯಾಟ್ಸ್ಮನ್ ನನ್ನು ಕಳೆದ ಜೂನ್ನಲ್ಲಿ ಇಂಗ್ಲೆಂಡ್ ತಂಡದ ಏಕದಿನ ನಾಯಕತ್ವದಿಂದ ಕೆಳಗಿಳಸಲಾಗಿತ್ತು.
126 ಏಕದಿನ ಮತ್ತು 72 ಟಿ-20 ಪಂದ್ಯಗಳಲ್ಲಿ ಮಾರ್ಗನ್ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದರು. ನಾಯಕರಾಗಿ ಎರಡು ಮಾದರಿಗಳಲ್ಲಿ 118 ಗೆಲುವು ಸಾಧಿಸಿರುವುದು ಕೂಡಾ ದಾಖಲೆಯಾಗಿದೆ. ಹೆಮ್ಮೆಯಿಂದಲೇ ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವುದಾಗಿ ಅವರು ತಿಳಿಸಿದ್ದಾರೆ.
ಅನೇಕ ಸಮಾಲೋಚನೆ ನಂತರ ಕ್ರಿಕೆಟ್ ಬಿಟ್ಟು ಹೋಗಲು ಇದುವೇ ಸೂಕ್ತ ಸಮಯ ಎಂಬುದನ್ನು ನಾನು ನಂಬುತ್ತೇನೆ. ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೇನೆ. ಎಲ್ಲ ಕ್ರೀಡಾಪಟುವಿನಂತೆ ವೃತ್ತಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದೇನೆ. ಕುಟುಂಬ, ಸ್ನೇಹಿತರ ಸಹಕಾರ ಸದಾ ಇತ್ತು. ಈ ಸಂದರ್ಭದಲ್ಲಿ ಪತ್ನಿ, ಕುಟುಂಬ, ಸ್ನೇಹಿತರು , ಕೋಚ್, ಸಹ ಆಟಗಾರರು, ಅಭಿಮಾನಿಗಳಿಗೆ ಧನ್ಯವಾದ ಹೇಳಲು ಇಚ್ಚಿಸುತ್ತೇನೆ ಎಂದು ವಿದಾಯ ಸಂದೇಶದಲ್ಲಿ ತಿಳಿಸಿದ್ದಾರೆ.