ನವದೆಹಲಿ, ಫೆ 19 (DaijiworldNews/DB): ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ನ ಎರಡನೇ ಪಂದ್ಯದಲ್ಲಿಯೂ ಭಾರತ ಗೆದ್ದು ಬೀಗಿದೆ. ಆರು ವಿಕೆಟ್ಗಳ ಮೂಲಕ ಗೆಲುವು ಭಾರತದ ಪಾಲಾಗಿದೆ.
ನಾಲ್ಕು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಎರಡು ಗೆಲುವು ಭಾರತದ ಪಾಲಾಗಿದೆ. ಇನ್ನೂ ಒಂದು ಪಂದ್ಯವನ್ನು ಗೆದ್ದಲ್ಲಿ ಸರಣಿಯ ಗೆಲುವು ಭಾರತಕ್ಕೆ ಒಲಿದು ಬರಲಿದೆ. ಈ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು ಭಾರತಕ್ಕೆ 115 ರನ್ಗಳ ಗುರಿ ನೀಡಿತ್ತು.
ಈ ಗುರಿ ಬೆನ್ನತ್ತಿದ್ದ ಭಾರತ ತಂಡ 26.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 118 ರನ್ ಪೇರಿಸಿ ಗೆಲುವು ತನ್ನದಾಗಿಸಿಕೊಂಡಿತು. ಚೇತೇಶ್ವರ ಪೂಜಾರ ಮತ್ತು ಎಸ್. ಭರತ್ ಕ್ರಮವಾಗಿ 31 ಮತ್ತು 21 ರನ್ ದಾಖಲಿಸಿ ಅಜೇಯರಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿಶೇಷವೆಂದರೆ ಚೇತೇಶ್ವರ ಪೂಜಾರ ಭಾರತದ ಪರವಾಗಿ100ನೇ ಟೆಸ್ಟ್ ಮ್ಯಾಚ್ ಆಡಿದರು.
ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಜೋಡಿಯ ಸ್ಪಿನ್ ಮೋಡಿಯಿಂದಾಗಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದರು.