ನವದೆಹಲಿ, ಫೆ 21 (DaijiworldNews/MS): ಮಾತೃತ್ವ ವಿರಾಮದ ಪಡೆದು ಪುನರಾಗಮನ ಮಾಡುತ್ತಿರುವ ಭಾರತ ಸ್ಟಾರ್ ಹಾಗೂ ವಿಶ್ವದ ಮಾಜಿ ನಂ.1 ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್, ವಿಶ್ವಕಪ್ ಮತ್ತು ವಿಶ್ವ ಚಾಂಪಿಯನ್ಶಿಪ್ಗಳಿಗೆ ಅರ್ಹತೆ ಗಳಿಸಲು ವಿಫಲರಾಗಿದ್ದಾರೆ.
ಸೋನೆಪತ್ನಲ್ಲಿ ನಡೆದ 3 ದಿನಗಳ ಆಯ್ಕೆ ಟ್ರಯಲ್ಸ್ನ ವನಿತಾ ರಿಕರ್ವ್ ವಿಭಾಗದಲ್ಲಿ ವಿಶ್ವದ ಮಾಜಿ ನಂ.1 ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅಂತಿಮ ಹಂತದಲ್ಲಿಅಗ್ರ 8ರ ಒಳಗಡೆ ಸ್ಥಾನ ಸಂಪಾದಿಸುವಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದರು. ಜತೆಗೆ ಹಾಲಿ ಜೂನಿಯರ್ ವಿಶ್ವ ಚಾಂಪಿಯನ್ ಕೋಮಲಿಕಾ ಬಾರಿ, ಮಾಜಿ ರಾಷ್ಟ್ರೀಯ ಚಾಂಪಿಯನ್ ರಿಧಿ ಪೋರ್ ಕೂಡ ಟಾಪ್-8 ಸ್ಥಾನ ಕಾಯ್ದುಕೊಳ್ಳಲಾಗದೆ ಹೊರಬಿದ್ದರು.
ಅದರೂ, ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಪ್ಯಾರಿಸ್ 2024 ರ ಓಪನ್ ಟ್ರಯಲ್ನಿಂದ ದೀಪಿಕಾ ಇನ್ನೂ ನಾಲ್ಕನೇ ಸತತ ಒಲಿಂಪಿಕ್ಸ್ಗೆ ಪುನರಾಗಮನ ಮಾಡುವ ನಿರೀಕ್ಷೆ ಇದೆ
ಇನ್ನು ದೀಪಿಕಾ ಕುಮಾರಿ ಅವರ ಪತಿ ಅತನು ದಾಸ್ ಒಂದು ವರ್ಷದ ಬಳಿಕ ರೀಕರ್ವ್ ವಿಭಾಗಕ್ಕೆ ಮರಳಲು ಯಶಸ್ವಿಯಾಗಿದ್ದಾರೆ.