ನವದೆಹಲಿ, ಫೆ 25 (DaijiworldNews/DB): ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರ ಕೋರ್ಚ್, ದಕ್ಷಿಣ ಕೊರಿಯಾದ ಪಾರ್ಕ್ ಟೇ ಸಾಂಗ್ ಅವರು ತಮ್ಮ ಹುದ್ದೆಗೆ ಶೀಘ್ರ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ.
ಈ ಸಂಬಂಧ ಅವರೇ ಹೇಳಿಕೆ ನೀಡಿದ್ದು, ಇತ್ತೀಚಿನ ಪಂದ್ಯಗಳಲ್ಲಿ ಸಿಂಧು ಅವರ ಕಳಪೆ ಪ್ರದರ್ಶನದ ಹೊಣೆಯನ್ನು ನಾನೇ ಹೊರಬೇಕಿದೆ. ಅವರಿಗೆ ಹೊಸ ತರಬೇತುದಾರರ ಅಗತ್ಯವಿದೆ. ಹೀಗಾಗಿ ನಾನು ಈ ಹುದ್ದೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.
ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಅವರ ಕೋಚ್ ಆಗಿ ಇನ್ನೂ ಮುಂದುವರಿಯಲು ಸಾಧ್ಯವಾಗದಿರುವ ಬಗ್ಗೆ ನನಗೆ ನೋವಿದೆ. ಆದರೆ ಅವರಿಗೆ ನನ್ನ ಬೆಂಬಲ ಸದಾ ಇರಲಿದೆ. ಮುಂದಿನ ಒಲಿಂಪಿಕ್ಸ್ಗಳಲ್ಲಿಯೂ ಅವರು ಸ್ವರ್ಣ ಪದಕ ಜಯಿಸಲಿ ಎಂಬುದೇ ನನ್ನ ಇರಾದೆ ಎಂದು ಅವರು ಇನ್ಸ್ಟಾಂಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪಾರ್ಕ್ ಟೇ ಸಾಂಗ್ ಅವರ ತರಬೇತಿಯೊಂದಿಗೆ ಪಿ.ವಿ. ಸಿಂಧು ಕಂಚಿನ ಪದಕ ಜಯಿಸಿದ್ದರು. ಮುಂದೆ ತಮ್ಮ ಕೋಚ್ ಆಗಿ ಸಿಂಧು ಯಾರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುದು ತಿಳಿದು ಬಂದಿಲ್ಲ.