ಪ್ಯಾರಿಸ್, ಫೆ 28 (DaijiworldNews/DB): ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ 2022ರ ಅತ್ಯುತ್ತಮ ಫಿಫಾ ಪುರುಷ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್ಜಿ) ತಂಡದ ಸಹ ಆಟಗಾರ ಕೈಲಿಯನ್ ಎಂಬಪ್ಪೆ ಮತ್ತು ರಿಯಲ್ ಮ್ಯಾಡ್ರಿಡ್ ನಾಯಕ ಕರೀಮ್ ಬೆಂಜೆಮಾ ಅವರೂ ಈ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದರು. ಕೊನೆಗೆ ಪ್ರಶಸ್ತಿಯು ಮೆಸ್ಸಿ ಪಾಲಾಗಿದೆ.
ಇನ್ನು ಸ್ಪೇನ್ನ ಅಲೆಕ್ಸಿಯಾ ಪುಟೆಲ್ಲಾಸ್ 2022ರ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿ ಗೆದ್ದಿದ್ದಾರೆ.