ನವದೆಹಲಿ, ಮಾ 18 (DaijiworldNews/DB): ವಿಶ್ವದ ಅತ್ಯಂತ ಕುಳ್ಳ ದೇಹದಾರ್ಢ್ಯಪಟು ಪ್ರತೀಕ್ ಮೋಹಿತೆ ಅವರು ಇದೀಗ ತಮ್ಮ ತಮ್ಮ ಪ್ರಿಯತಮೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಹಾರಾಷ್ಟ್ರದ ರಾಯಗಢ ಮೂಲದ 28 ವರ್ಷದ ಪ್ರತೀಕ್ ಅವರು 3 ಅಡಿ 4 ಇಂಚು ಎತ್ತರವಿದ್ದು, ಅವರ ಪತ್ನಿ ಜಯಾ (22 ವರ್ಷ) 4 ಅಡಿ 2 ಇಂಚು ಎತ್ತರವಿದ್ದಾರೆ. ಪ್ರತೀಕ್ ಮತ್ತು ಜಯಾ ನಾಲ್ಕು ವರ್ಷಗಳ ಹಿಂದೆ ಭೇಟಿಯಾಗಿದ್ದು, ಅಲ್ಲಿಂದ ಅವರ ಪ್ರೀತಿ ಶುರುವಾಗಿತ್ತು. ಭೇಟಿಯಾದ ದಿನದಿಂದಲೇ ನಾನವರನ್ನು ಇಷ್ಟಪಟ್ಟಿದ್ದೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಪ್ರತೀಕ್ ಹೇಳಿಕೊಂಡಿದ್ದಾರೆ.
ವಿಶ್ವದ ಅತ್ಯಂತ ಕುಳ್ಳ ದೇಹದಾರ್ಢ್ಯ ಪಟು ಎಂಬುದಾಗಿ 2021ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪುಟಕ್ಕೆ ಸೇರ್ಪಡೆಯಾಗಿದ್ದರು. ಇನ್ನು ಅವರು ಇನ್ಸ್ಟಾಗ್ರಾಂನ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಕೂಡಾ ಆಗಿದ್ದು, ತಮ್ಮ ಫಿಟ್ನೆಸ್ ಕುರಿತ ವೀಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಸಾಕಷ್ಟು ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ.