ಮುಂಬೈ, ಮಾ 20(SM): 2019ರ ವಿಶ್ವ ಕಪ್ ಗೂ ಮೊದಲೇ ಐಪಿಎಪ್ ಹಂಗಾಮಾ ನಡೆಯಲಿದೆ. ಐಪಿಎಲ್ ಹಾಗೂ ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ತಿಂಗಳಂತರದಲ್ಲಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಅನುಭವಿ ಆಟಗಾರರು ಈ ಸಲದ ಐಪಿಎಲ್ ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನ. ವಿಶ್ವಕಪ್ ನಲ್ಲಿ ಆಟವಾಡಲಿರುವ ಕಾರಣ ಅವರಿಗೆ ವಿಶ್ರಾಂತಿ ನೀಡಲಾಗುತ್ತಿದೆ.
ಈ ನಡುವೆ ಭಾರತದ ಕೆಲವು ಹಿರಿಯ ಆಟಗಾರರಿಗೆ ಈ ಐಪಿಎಲ್ ಪಂದ್ಯ ಕೊನೆಯ ಪಂದ್ಯವಾಗಲಿದೆ. ಐವರು ಸ್ಟಾರ್ ಪ್ಲೇಯರ್ಸ್ಗಳಿಗೆ 12ನೇ ಆವೃತ್ತಿ ಐಪಿಎಲ್ ಟೂರ್ನಿ ಕೊನೆಯದಾಗಲಿದೆ.
2019ರ 12ನೇ ಆವೃತ್ತಿಗೆ ಸಿಎಸ್ ಕೆ ಫ್ರಾಂಚೈಸಿ ಹರ್ಭಜನ್ ಸಿಂಗ್ರನ್ನ ಖರೀದಿಸಿದ್ದು, ಇದುವೆ ಅವರ ಕೊನೆಯ ಐಪಿಎಲ್ ಎನ್ನಲಾಗಿದೆ. ಇನ್ನು ಶ್ರೀಲಂಕಾದ ಆಟಗಾರ ಲಸಿಂತ್ ಮಾಲಿಂಗ ಅವರನ್ನು ಮುಂಬೈ ಇಂಡಿಯನ್ಸ್ ಮತ್ತೆ ಆಯ್ಕೆ ಮಾಡಿಕೊಂಡಿದೆ. ಮಾಲಿಂಗ ಮುಂಬೈ ಪರ ಮಾಡುವ ಬೌಲಿಂಗ್ ಐಪಿಎಲ್ ನಲ್ಲಿ ಕೊನೆಯ ಬೌಲಿಂಗ್ ಎನ್ನಲಾಗಿದೆ. ಐಪಿಎಲ್ ನ ಯಾವೊಬ್ಬ ತಂಡಗಳು ಅವರನ್ನು ಆಯ್ಕೆ ಮಾಡದಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಇನ್ನು ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಅವರಿಗೂ ಕೂಡ ಈ ಸಲದ ಐಪಿಎಲ್ ಕೊನೆಯ ಪಂದ್ಯ ಎನ್ನಲಾಗಿದೆ. ಅಲ್ಲದೆ, ಆಸೀಸ್ ಆಲ್ರೌಂಡರ್ ಶೇನ್ ವ್ಯಾಟ್ಸನ್ ಕೂಡ ಮುಂದೆ ಐಪಿಎಲ್ ಆಡುವುದು ಅನುಮಾನ ಎನ್ನಲಾಗುತ್ತಿದೆ.
ಇನ್ನು ಟೀಂ ಇಂಡಿಯಾದ ಸಿಕ್ಸರ್ ಯುವರಾಜ್ ಸಿಂಗ್ಗೆ ಖಂಡಿತಾ ಇದೇ ಕೊನೆಯ ಐಪಿಎಲ್ ಎನ್ನಲಾಗಿದೆ. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಎಡಗೈ ಬ್ಯಾಟ್ಸ್ಮೆನ್ ಯುವರಾಜ್ ರನ್ನು ಯಾವುದೇ ತಂಡ ಆಯ್ಕೆ ಮಾಡಿರಲಿಲ್ಲ. ಅಂತಿಮವಾಗಿ ಮುಂಬೈ ಇಂಡಿಯಾನ್ ತಂಡವನ್ನು ಯುವಿ ಸೇರಿಕೊಂಡಿದ್ದಾರೆ. ಒಂದೊಮ್ಮೆ ಈ ಬಾರಿ ಕಳಪೆ ಪ್ರದರ್ಶನ ತೋರಿದ್ದಲ್ಲಿ ಮುಂದಿನ ಸಲ ಅವಕಾಶ ಸಿಗುವ ಲಕ್ಷಣಗಳಿಲ್ಲ ಎನ್ನಲಾಗಿದೆ.