ಮುಂಬಯಿ, ಮಾ 29 (DaijiworldNews/DB): ಈ ಬಾರಿಯ ಐಪಿಎಲ್ಗೆ ಇದೇ 31ರಂದು ಅದ್ದೂರಿ ಚಾಲನೆ ಸಿಗಲಿದೆ. ಈ ಐಪಿಎಲ್ನೊಂದಿಗೆ ಕ್ರಿಕೆಟಿಗ ಎಂ.ಎಸ್. ಧೋನಿ ಅವರು ತಮ್ಮ ಐಪಿಎಲ್ ವೃತ್ತಿ ಜೀವನವನ್ನು ಕೊನೆಗೊಳಿಸಲಿದ್ದಾರೆ. ಆದರೆ ಧೋನಿ ಇನ್ನೂ ಎರಡ್ಮೂರು ಸೀಸನ್ಗಳಲ್ಲಿ ಆಡುವಷ್ಟು ಫಿಟ್ ಆಗಿದ್ದಾರೆ ಎನ್ನುವ ಮೂಲಕ ಟೀಂ ಇಂಡಿಯಾ ಕಪ್ತಾನ ಧೋನಿ ಫಿಟ್ನೆಸ್ ಬಗ್ಗೆ ಹೇಳಿಕೊಂಡಿದ್ದಾರೆ.
ಹೌದು. ಮುಂಬೈ ಇಂಡಿಯನ್ಸ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್, ಹಿಟ್ಮ್ಯಾನ್ ರೋಹಿತ್ ಶರ್ಮ ಧೋನಿ ಅವರ ಬಗ್ಗೆ ಮಾತನಾಡಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಧೋನಿ ನಿವೃತ್ತಿ ಬಗ್ಗೆ ನಾನು ಕೇಳುತ್ತಲೇ ಇದ್ದೇನೆ. ಈ ಬಾರಿ ಅವರಿಗೆ ಕೊನೆಯ ಐಪಿಎಲ್ ಅಂತೆ. ಆದರೆ ಅವರು ಇನ್ನೂ ಎರಡ್ಮೂರು ಸೀಸನ್ಗಳಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಅದಕ್ಕೆ ಫಿಟ್ ಆಗಿದ್ದಾರೆ ಎಂದರು.
ಎಂ.ಎಸ್.ಧೋನಿ 2008ರಿಂದ ಚೆನ್ನೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಬಾರಿ ಮಾ. 31ರಂದು ಅಂದರೆ ಐಪಿಎಲ್ ಆರಂಭದ ದಿನದಂದೇ ಧೋನಿ ನೇತೃತ್ವದ ಚೆನ್ನೈ ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.