ಲಕ್ನೋ, ಮೇ 02 (DaijiworldNews/MS): ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ಹಾಗೂ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯ ನಡುವೆ ಸೋಮವಾರ ನಡೆದ ಪಂದ್ಯದ ಬಳಿಕ ಮಾತಿನ ಚಕಮಕಿ ನಡೆದಿದ್ದುಈ ಹಿನ್ನಲೆಯಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಭಾರೀ ದಂಡ ವಿಧಿಸಲಾಗಿದೆ. ಲಕ್ನೋ ತಂಡದ ಬೌಲರ್ ನವೀನ್-ಉಲ್-ಹಕ್ ದಂಡ ವಿಧಿಸಲಾಗಿದೆ.
ಪಂದ್ಯ ಮುಗಿದ ಬಳಿಕ ಆಟಗಾರರ ನಡುವಣ ಹಸ್ತಲಾಘವದ ವೇಳೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರು ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಉಭಯ ತಂಡಗಳ ಆಟಗಾರರು ಮಧ್ಯೆ ಪ್ರವೇಶಿಸಿ ತಿಳಿಸಿಗೊಳಿಸಿದರು.
ಐಪಿಎಕ್ ನಿಯಮದ ಲೆವೆಲ್-2ರ ಉಲ್ಲಂಘನೆಯಾಗಿದ್ದು ಇವರಿಬ್ಬರಿಗೂ ಸಂಪೂರ್ಣ ಪಂದ್ಯ ಸಂಭಾವನೆಯ ದಂಡ ವಿಧಿಸಲಾಗಿದೆ.
ನವೀನ್ ಉಲ್ ಹಕ್ ಕೂಡ ಈ ವಾಗ್ಯುದ್ಧದಲ್ಲಿ ಭಾಗಿಯಾದ ಕಾರಣ ಅವರಿಗೆ ಪಂದ್ಯ ಸಂಭಾವನೆಯ 50% ದಂಡ ವಿಧಿಸಲಾಗಿದೆ. ಆಟಗಾರರು,ಮೆಂಟರ್ಗಳ ಈ ವರ್ತನೆ ಯಾರಿಗೂ ಮಾದರಿಯಲ್ಲ ಎಂದು ಮ್ಯಾಚ್ ರೆಫ್ರಿ ಅಂತಿಮ ತೀರ್ಮಾನ ಮಾಡಿದ್ದಾರೆ.