ನವದೆಹಲಿ, ಮೇ 11 (DaijiworldNews/MS): : ಆರ್ ಸಿಬಿ ಆಟಗಾರರಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಔತಣ ಕೂಡ ಏರ್ಪಡಿಸಿದ್ದು, ದೆಹಲಿಯಲ್ಲಿರುವ ತಮ್ಮದೇ ಮಾಲೀಕತ್ವದ ರೆಸ್ಟೋರೆಂಟ್ "ಒನ್8" ಗೆ ತಂಡದ ಆಟಗಾರರರನ್ನು ಕರೆದೊಯ್ದಿದ್ದರು.
ಆದರೆ ಈ ಪಾರ್ಟಿಗೆ ಮುನ್ನ ಕುತೂಹಲಕಾರಿ ಸಂಗತಿಯೊಂದು ನಡೆದಿದೆ. ರೆಸ್ಟೋರೆಂಟ್ ಗೂ ಒಳಹೋಗುವ ಮುನ್ನ ಇವರ ಹಿಂದೆ ಬಿದ್ದಿದ್ದ ಪಾಪರಾಜಿಗಳು ಒಳ್ಳೇ ಫೋಸ್ ಸಿಗಬೇಕು ಎಂದು ಇಬ್ಬರನ್ನು ಕರೆಯೊತ್ತಲೇ ಇದ್ದರು. ಹಾಗೆ ಕರೆಯುವಾಗ ಒಬ್ಬ ಫೋಟೋಗ್ರಾಫರ್ ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ 'ಅನುಷ್ಕಾ ಸರ್' ಎಂದಿದ್ದಾನೆ.
ಅಲ್ಲಿವರೆಗೂ ಮೌನವಾಗಿಯೇ ಫೋಸ್ ನೀಡುತ್ತಿದ್ದ ವಿರಾಟ್ ಕೊಹ್ಲಿ ಈ ಕರೆಗೆ ವಿಶೇಷವಾಗಿ ರೆಸ್ಪಾಂಡ್ ಮಾಡಿ "ನನ್ನನ್ನು ಮೇಡಂ ಕೊಹ್ಲಿ " ಎಂದು ಕರೆಯುತ್ತೀರಾ ಎಂದು ಕಾಲೆಳೆದಿದ್ದು ಈ ವಿಡಿಯೋ ವೈರಲ್ ಆಗಿದೆ.