ಕೋಟ, ಮೇ 28 (DaijiworldNews/HR): ಮಲೇಷಿಯಾದಲ್ಲಿ ನಡೆದ ಜೋಹಾರ್ ಸಿಂಗಾಪುರ್ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೇಟಿಕ್ ಕ್ರೀಡಾ ಕೂಟದಲ್ಲಿ ಕೋಟದ ದಿನೇಶ್ ಗಾಣಿಗ ಅವರು ಒಂದು ಬೆಳ್ಳಿ, ಒಂದು ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.
ಒಟ್ಟು 20 ದೇಶಗಳ 500ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದು ಜೂನ್ ಎರಡರಂದು ಭಾರತಕ್ಕೆ ಮರಳಲಿದ್ದಾರೆ.
ಈ ಹಿಂದೆ ಸಿಂಗಾಪುರ್ ಒಂದು ಗೋಲ್ಡ್ ಒಂದು ಸಿಲ್ವರ್, 2022 ಶ್ರೀಲಂಕಾ ಒಂದು ಸಿಲ್ವರ್ ಮಾಸ್ಟರ್ ಅಥ್ಲೆಟಿಕ್ನಲ್ಲಿ ಪಡೆದಿರುವುದು ಇಲ್ಲಿ ಸ್ಮರಿಸಬಹುದಾಗಿದೆ. ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಸಮಿತಿಯ ಪ್ರದಾನ ಕಾರ್ಯದರ್ಶಿಯಾಗಿ ಶ್ರೀಯುತರು ಸೇವೆ ಸಲ್ಲಿಸುತ್ತಿದ್ದಾರೆ.