ಅಹ್ಮದಾಬಾದ್, ಮೇ 30 (DaijiworldNews/KH): ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಮತ್ತೆ 5ನೇ ಬಾರಿ ಐಪಿಎಲ್ ಕಿರೀಟವನ್ನು ಮುಡಿಗೇರಿಸಿದ ಚೆನ್ನೈ ಸೂಪರ್ ಕಿಂಗ್ಸ್.
ನಿನ್ನೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಜಯ ಸಾಧಿಸುವುದರ ಮೂಲಕ ಮತ್ತೊಮ್ಮೆ ಸಿಎಸ್ಕೆ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 15 ಓವರ್ ನಲ್ಲಿ 171 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ ತಂಡ ನಿಗದಿತ 15 ಓವರ್ ನಲ್ಲಿ 172 ರನ್ ಗಳಿಸಿ 5 ವಿಕೆಟ್ ಗಳ ಅಂತರ ವಿರೋಚಿತ ಜಯ ದಾಖಲಿಸಿದೆ.
ಗುಜರಾತ್ ತಂಡ ಮೊದಲು ಬ್ಯಾಟ್ ಮಾಡಿ 20 ಓವರಲ್ಲಿ ಬರೋಬ್ಬರಿ 214 ರನ್ ಪಡೆದುಕೊಂಡಿತು. ಆದರೆ ಚೆನ್ನೈ ಗುರಿ ಬೆನ್ನತ್ತುವ ವೇಳೆ ಮಳೆ ಅಡ್ಡಿ ಪಡಿಸಿತು. ಹೀಗಾಗಿ ಡಕ್ವರ್ತ್ ಲೂಯಿಸ್ ನಿಯಮದನ್ವಯ ಚೆನ್ನೈಗೆ 15 ಓವರಲ್ಲಿ 171 ರನ್ ಗುರಿ ನಿಗದಿಪಡಿಸಲಾಯಿತು.
ಡಕೌರ್ತ್ ಲುಯೂಸ್ ನಿಯಮದ ಅನ್ವಯ ಚೆನ್ನೈ ತಂಡ 5 ವಿಕೆಟ್ಗಳ ಗೆಲುವು ಕಂಡಿತು. ಕೊನೆಯ 2 ಎಸೆತದಲ್ಲಿ ಗೆಲ್ಲಲು 10 ರನ್ ಬೇಕಿದ್ದಾಗ ರವೀಂದ್ರ ಜಡೇಜಾ 1 ಫೋರ್, ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದಿಟ್ಟರು.
ಇದೀಗ ಚಾಂಪಿಯನ್ ಆದ ಚೆನ್ನೈ ತಂಡಕ್ಕೆ ಬರೋಬ್ಬರಿ 20 ಕೋಟಿ ರೂ. ನೀಡಲಾಗಿದೆ. ರನ್ನರ್ ಅಪ್ ಆದ ಗುಜರಾತ್ ಟೈಟಾನ್ಸ್ ತಂಡ 12.5 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ.