ಲಂಡನ್, ಜೂ 07 (DaijiworldNews/SM): ‘ದಿ ಓವಲ್’ ಕ್ರೀಡಾಂಗಣದಲ್ಲಿ 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯುತ್ತಿದ್ದು ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಆಸಿಸ್ ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿದೆ.
ಟಾಸ್ ಗೆದ್ದ ಟೀಂ ಇಂಡಿಯಾ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದರಿಂದಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಉತ್ತಮ ಫಾರ್ಮ್ ನಲ್ಲಿದೆ. ೮೫ ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ. ಟ್ರವಿಸ್ ಹೆಡ್ 146, ಸ್ಟೀವನ್ ಸ್ಮಿತ್ 95 ರನ್ ಗಳಿಸಿ ಜೊತೆಯಾಟ ಮುಂದುವರೆಸಿದ್ದಾರೆ. ಆರಂಭಿಕ ಆಟಗಾರ ಡೇವಿಡ್ ವಾರ್ನರ್ 43 ರನ್ ಗಳಿಸಿದರು.
ಇನ್ನು ಭಾರತದ ಪರ ಶಮಿ, ಸಿರಾಜ್, ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು.