ಪ್ಯಾರೀಸ್, ಜೂ 12 (DaijiworldNews/MS): ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮೊಟ್ಟಮೊದಲ ಆಟಗಾರ ಎಂಬ ವಿಶ್ವದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಜೊಕೊವಿಕ್ ಅವರು ನಾಲ್ಕನೇ ಶ್ರೇಯಾಂಕದ ನಾರ್ವೆ ಆಟಗಾರ ಕ್ಯಾಸ್ಪರ್ ರೂಡ್ ಅವರನ್ನು 7-6, 6-3, 7-5 ಅಂತರದಲ್ಲಿ ಏಕಪಕ್ಷೀಯವಾಗಿ ಸೋಲಿಸಿದ ಜೊಕೊವಿಕ್, ತಮ್ಮ ಮೂರನೇ ಫ್ರೆಂಚ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ದಾಖಲೆಯ 23ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ ನೊವಾಕ್ ಜೊಕೊವಿಕ್ ಗ್ರ್ಯಾಂಡ್ ಸ್ಲಾಮ್ಗಳ ಸಂಖ್ಯೆಯಲ್ಲಿ ದಂತಕಥೆ ರೋಜರ್ ಫೆಡರರ್, ಸ್ಪ್ಯಾನಿಷ್ ಸ್ಟಾರ್ ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿದ್ದಾರೆ. ಟೆನಿಸ್ ಇತಿಹಾಸದಲ್ಲಿ ನೊವಾಕ್ ಜೊಕೊವಿಕ್ ಈಗ ಪುರುಷರ ಸಿಂಗಲ್ಸ್ನಲ್ಲಿ ಅತಿ ಹೆಚ್ಚು ಗ್ರ್ಯಾನ್ಸ್ಲಾಮ್ಗಳನ್ನು ಗೆದ್ದ ದಾಖಲೆ ಬರೆದಿದ್ದಾರೆ.
ಪ್ರತಿ ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳಲ್ಲಿ ಕನಿಷ್ಠ ಮೂರು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ.