ನವದೆಹಲಿ, ಜೂ 12 (DaijiworldNews/SM): ಭಾರತ-ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಕೆರಿಬಿಯನ್ ನಾಡಲ್ಲಿ ಜುಲೈ 12 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ.
ಡೊಮಿನಿಕಾದಲ್ಲಿ ಜುಲೈ 12 ರಿಂದ 16 ರವರೆಗೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಹಾಗೆಯೇ 2ನೇ ಟೆಸ್ಟ್ ಪಂದ್ಯವು ಜುಲೈ 20 ರಿಂದ 24 ರವರೆಗೆ ಜರುಗಲಿದೆ. ಈ ಪಂದ್ಯಕ್ಕೆ ಟ್ರಿನಿಡಾಡ್ನ ಓವಲ್ ಮೈದಾನ ಆತಿಥ್ಯವಹಿಸಲಿದೆ.
ಇನ್ನು ಮೊದಲ ಏಕದಿನ ಪಂದ್ಯವು ಜುಲೈ 27 ರಂದು ನಡೆದರೆ, 2ನೇ ಏಕದಿನ ಪಂದ್ಯ ಜುಲೈ 29 ರಂದು ಜರುಗಲಿದೆ. ಈ 2 ಪಂದ್ಯಕ್ಕೂ ಬಾರ್ಬಡೋಸ್ನ ಕಿಂಗ್ಸ್ಸ್ಟನ್ ಓವಲ್ ಮೈದಾನದ ಆತಿಥ್ಯವಹಿಸಲಿದೆ. 3ನೇ ಏಕದಿನ ಪಂದ್ಯವು ಆಗಸ್ಟ್ 1 ರಂದು ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿದೆ.
ಹಾಗೆಯೇ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಆಗಸ್ಟ್ 3 ರಂದು, 2ನೇ ಪಂದ್ಯ ಆಗಸ್ಟ್ 6 ರಂದು, 3ನೇ ಪಂದ್ಯ ಆಗಸ್ಟ್ 8 ರಂದು ನಡೆಯಲಿದೆ. ಇನ್ನು 4ನೇ ಪಂದ್ಯವು ಆಗಸ್ಟ್ 12 ರಂದು, 5ನೇ ಟಿ20 ಪಂದ್ಯ ಆಗಸ್ಟ್ 13 ರಂದು ಫ್ಲೋರಿಡಾದಲ್ಲಿ ನಡೆಯಲಿದೆ.
ಈ ಸರಣಿಗಾಗಿ ಇನ್ನೂ ಕೂಡ ಟೀಮ್ ಇಂಡಿಯಾವನ್ನು ಪ್ರಕಟಿಸಿಲ್ಲ. ಅತ್ತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಹೀನಾಯವಾಗಿ ಸೋತಿರುವ ಕಾರಣ ಭಾರತ ಟೆಸ್ಟ್ ತಂಡದಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.
ಹಾಗೆಯೇ ಮುಂಬರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಸೀಮಿತ ಓವರ್ಗಳ ಸರಣಿಗಾಗಿ ಬಲಿಷ್ಠ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.