ವಾರಣಾಸಿ, ಜೂ 24 (DaijiworldNews/MS): ಭಾರತದ ಮಾಜಿ ಜೂನಿಯರ್ ಹಾಕಿ ಆಟಗಾರ ರಾಜೀವ್ ಕುಮಾರ್ ಮಿಶ್ರಾ (46) ವಾರಣಾಸಿಯ ಸರ್ಸೌಲಿ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಮೂಲದ ಪ್ರಕಾರ, ರಾಜೀವ್ ಕೆಲವು ದಿನಗಳ ಹಿಂದೆ ಸಾವನ್ನಪ್ಪಿರಬೇಕು ಮತ್ತು ಅವರ ಮನೆಯಿಂದ ದುರ್ವಾಸನೆ ಬರುತ್ತಿದ್ದ ಕಾರಣ ಅವರ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ವಿಷಯ ಬೆಳಕಿಗೆ ಬಂದಿದೆ.
ಮಿಲ್ಟನ್ ಕೇನ್ಸ್ನಲ್ಲಿ 1997 ರಲ್ಲಿ ನಡೆದ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ಬೆಳ್ಳಿ ಪದಕವನ್ನು ಗಳಿಸುವಲ್ಲಿ ರಾಜೀವ್ ಮಿಶ್ರಾ ಪ್ರಮುಖ ವಹಿಸಿದ್ದರು.