ಮುಂಬೈ, ಜೂ 28 (DaijiworldNews/MS): ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಆ್ಯಶಸ್ ಟೆಸ್ಟ್ ಪಂದ್ಯದ ವೇಳೆ ಪ್ರತಿಭಟನಾಕಾರರು ಪಂದ್ಯಕ್ಕೆ ಅಡ್ಡಿ ಮಾಡಿದ ಘಟನೆ ನಡೆದಿದೆ.
ಎರಡನೇ ಓವರ್ ಆರಂಭದ ವೇಳೆ ಪರಿಸರ ಪರ ಹೋರಾಟಗಾರರ ಗುಂಪು ಮೈದಾನಕ್ಕೆ ನುಗ್ಗಿದೆ. ಈ ವೇಳೆ ಇಂಗ್ಲೆಂಡ್ ಆಟಗಾರ ಜಾನಿ ಬೆರಿಸ್ಟೋ ಪ್ರತಿಭಟನೆ ಮಾಡಿದ್ದ ವ್ಯಕ್ತಿಯನ್ನು ಎತ್ತಿಕೊಂಡು ಗ್ರೌಂಡ್ನಿಂದ ಹೋಗಿದ್ದಾರೆ.
ಈ ಘಟನೆಗೆ ಟೀಂ ಇಂಡಿಯಾದ ಅಶ್ವಿನ್ ತಮಾಷೆಯಾಗಿ ಟ್ವಿಟರ್ನಲ್ಲಿ ಕಾಮೆಂಟ್ ಮಾಡಿದ್ದಾರೆ. ʻಎರಡನೇ ಟೆಸ್ಟ್ಗೆ ಉತ್ತಮ ಆರಂಭ. ಜಾನಿ ಬೆರಿಸ್ಟೋ ಈಗಾಗಲೇ ಹೆವಿ ಲಿಫ್ಟಿಂಗ್ ಮಾಡಿದ್ದಾರೆʼ ಎಂದು ಹಾಸ್ಯಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ