ಚಟ್ಟೊಗ್ರಾಮ್ಬಾಂ, ಜು 11 (DaijiworldNews/SM): ಗ್ಲಾದೇಶ ಹಾಗೂ ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ವೈಟ್ ವಾಶ್ ನಿಂದ ತಪ್ಪಿಸಿಕೊಂಡಿದೆ. ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಅಫ್ಘಾನಿಸ್ತಾ 2-1 ಅಂತರ ಗೆದ್ದುಕೊಂಡಿದೆ.
ಇನ್ನು ಈ ಸರಣಿ ಕೊನೆಯ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಆರಂಭದಲ್ಲಿಯೇ ಹಿನ್ನಡೆಯನ್ನು ಅನುಭವಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 15 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಭಾರೀ ಹಿನ್ನಡೆ ಅನುಭವಿಸಿತು. ನಂತರವೂ ಅಫ್ಘಾನಿಸ್ತಾನದ ಬ್ಯಾಟ್ಗಳ ವಿರುದ್ಧ ಬಾಂಗ್ಲಾದೇಶದ ಬೌಲಿಂಗ್ ವಿಭಾಗ ಮೇಲುಗೈ ಸಾಧಿಸುತ್ತಲೇ ಸಾಗಿತ್ತು. ಅಜ್ಮತುಲ್ಲಾ 56 ರನ್ಗಳನ್ನು ಗಳಿಸಿದ್ದು ಹೊರತುಪಡಿಸಿದರೆ ಉಳಿದೆಲ್ಲಾ ಆಟಗಾರರು ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಕಾರಣ 126 ರನ್ಗಳನ್ನು ಗಳಿಸಲಷ್ಟೇ ಶಕ್ರವಾಯಿತು.
ಬಾಂಗ್ಲಾದೇಶದ ಪರವಾಗಿ ಶೋರಿಫುಲ್ ಇಸ್ಲಾಮ್ 9 ಓವರ್ಗಳಲ್ಲಿ 21 ರನ್ ನೀಡಿ 4 ವಿಎಕಟ್ ಪಡೆಯುವ ಮೂಲಕ ಅಫ್ಘನ್ ಪಡೆಗೆ ದೊ್ಡ ಆಘಾತ ನೀಡಿದ್ದಾರೆ. ಉಳಿದಂತೆ ತಸ್ಕಿನ್ ಅಹ್ಮದ್ ಮತ್ತು ತೈಜುಲ್ ಇಸ್ಲಾಮ್ ತಲಾ 2 ವಿಕೆಟ್ ಪಡೆದರೆ, ಮೆಹದಿ ಹಸನ್ ಮಿರಾಜ್ ಮತ್ತು ಶಕೀಬ್ ಅಲ್ ಹಸನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ಕೂಡ ಮೊದಲ ವಿಕೆಟನ್ನು 2 ರನ್ ಆಗುವಷ್ಟರಲ್ಲಿಯೇ ಕಳೆದುಕೊಂಡರೂ ಲಿಟನ್ ದಾಸ್ ಉತ್ತಮ ಪ್ರದರ್ಶನ ನೀಡಿ ತಂಡವನ್ನು ಮುನ್ನಡೆಸಿದರು. ಲಿಟನ್ ದಾಸ್ ಅಜೇಯ 53 ರನ್ಗಳನ್ನು ಗಳಿಸಿದ್ದು ಶಕೀಬ್ ಅಲ್ ಹಸನ್ 39 ರನ್ಗಳಿಸಿ ಔಟಾದರು. ತೌಹಿದ್ ಹ್ರಿದಯ್ ಅಜೇಯ 22 ರನ್ಗಳನ್ನು ಗಳಿಸಿದರು. ಈ ಮೂಲಕ ಬಾಂಗ್ಲಾದೇಶ ಈ ಪಂದ್ಯವನ್ನು ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪುವಲ್ಲಿ ಯಶಸ್ವಿಯಾಯಿತು. ಇನ್ನು ಈ ಸರಣಿಯನ್ನು ಅಫ್ಘಾನಿಸ್ತಾನ 2-1 ಅಂತರದಿಂದ ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.