ನವದೆಹಲಿ,ಜು 12 (DaijiworldNews/MS): ಏಕದಿನ ಮಾದರಿಯ 2023ರ ಏಷ್ಯಾ ಕಪ್ ಪಂದ್ಯಾವಳಿಯು ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ನಡೆಯಲಿದ್ದು, ಈ ಪ್ರತಿಷ್ಠಿತ ಪಂದ್ಯಾವಳಿಗೆ ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯ ವಹಿಸಲಿವೆ. ಇನ್ನು ಶೀಘ್ರದಲ್ಲೇ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಲಿದೆ.
BCCI ಕಾರ್ಯದರ್ಶಿ ಜಯ್ ಶಾ ಅವರು ಪಿಸಿಬಿ ಮುಖ್ಯಸ್ಥ ಝಾಕಾ ಅಶ್ರಫ್ ಅವರನ್ನು ಭೇಟಿ ಮಾಡಿದ ನಂತರ ಏಷ್ಯಾ ಕಪ್ 2023ರ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಬಿಸಿಸಿಐನ ಅರುಣ್ ಧುಮಾಲ್ ಬಹಿರಂಗಪಡಿಸಿದ್ದಾರೆ.
ʻಪಾಕಿಸ್ತಾನದಲ್ಲಿ ಲೀಗ್ ಹಂತದ 4 ಪಂದ್ಯಗಳು ನಡೆಯಲಿವೆ. ನಂತರ ಶ್ರೀಲಂಕಾದಲ್ಲಿ ಭಾರತ-ಪಾಕಿಸ್ತಾನ ಎರಡೂ ಪಂದ್ಯಗಳನ್ನು ಒಳಗೊಂಡಂತೆ ಒಂಬತ್ತು ಪಂದ್ಯಗಳು ನಡೆಯಲಿವೆ. ಎರಡೂ ತಂಡ ಫೈನಲ್ಗೆ ಬಂದರೆ 3ನೇ ಪಂದ್ಯವನ್ನು ಅಲ್ಲೇ ಆಡಲಿದೆʼ ಎಂದು ಧುಮಾಲ್ ಡರ್ಬನ್ನಲ್ಲಿ ಹೇಳಿದ್ದಾರೆ.