ನವದೆಹಲಿ, ಏ 03(SM): ಮೇ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆ ಏಪ್ರಿಲ್ 20ರೊಳಗೆ ನಡೆಯಲಿದೆ. ಈ ನಡುವೆ ಯಾರೆಲ್ಲ ಅಂತಿಮ ಹಂತದಲ್ಲಿ ಆಯ್ಕೆಗೊಂದು ತಂದ ಸೇರಲಿದ್ದಾರೆ ಎನ್ನುವುದು ಸದ್ಯದ ಕುತೂಹಲವಾಗಿದೆ.
ಮಹಾಸಮರದಲ್ಲಿ ಹೋರಾಡಲು ಹಲವು ಹಿರಿಯರು ಹಾಗೂ ಕಿರಿಯ ಆಟಗಾರರು ಉತ್ಸುಕರಾಗಿದ್ದಾರೆ. ಆದರೆ ಅಂತಿಮವಾಗಿ ೧೫ ಮಂದಿ ಮಾತ್ರ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ. ಈ ನಡುವೆ ತಂಡದ ಯುವ ಆಟಗಾರ ರಿಷಭ್ ಪಂತ್ ಪರ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಬ್ಯಾಟ್ ಬೀಸಿದ್ದಾರೆ. ರಿಷಬ್ ಪಂತ್ ರನ್ನು ಧೋನಿ ಜತೆ ಹೋಲಿಸುವುದು ಸರಿಯಲ್ಲ. ವಿಶ್ವದ ಯಾವುದೇ ಆಟಗಾರನೂ ಧೋನಿಯ ರೀತಿಯಲ್ಲಿ ಆಡಲು ಸಾಧ್ಯವಿಲ್ಲ ಎಂದಿದ್ದಾರೆ.
ಧೋನಿ ಜತೆ ರಿಷಭ್ ಹೋಲಿಕೆ ಮಾಡಿ, ಒತ್ತಡಕ್ಕೊಳಗಾಗುವಂತೆ ಮಾಡುವುದು ಸರಿಯಲ್ಲ. ಆತನ ಸಮಯ ಬರುತ್ತದೆ ಎಂದು ಹೇಳಿದ್ದಾರೆ. ರಿಷಭ್ ಪಂತ್ ಓರ್ವ ಪ್ರತಿಭಾವಂತ ಆಟಗಾರ. ಅವರಿಗೆ ಸಮಯವಕಾಶ ಬೇಕು ಎಂದಿರುವ ಕಪಿಲ್, ವಿಶ್ವಕಪ್ನಲ್ಲಿ ಆಡಲು ವಿಕೆಟ್ ಕೀಪರ್ ಕಮ್ ಎಡಗೈ ಬ್ಯಾಟ್ಸ್ಮೆನ್ ಆಗಿ ಸೆಣಾಸಾಡುಲು ರಿಷಬ್ ಅರ್ಹ ಎಂಬುವುದಾಗಿ ತಿಳಿಸಿದ್ದಾರೆ.