ಬೆಂಗಳೂರು, ಜು 25 (DaijiworldNews/MS): ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಭಾರತೀಯ ಮೂಲದವರಾಗಿರುವ ಅವರ ಪತ್ನಿ ವಿನಿ ರಾಮನ್ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಮ್ಯಾಕ್ಸ್ವೆಲ್ ಅವರು ಗರ್ಭಿಣಿಯಾಗಿರುವ ಪತ್ನಿ ವಿನಿ ರಾಮನ್ ಅವರಿಗೆ ಭಾರತೀಯ ತಮಿಳು ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಈ ಕುರಿತ ಫೋಟೊ ಮತ್ತು ವಿಡಿಯೊಗಳನ್ನುಅವರು ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ತಮ್ಮ ಮನೆಯಲ್ಲಿ ಮ್ಯಾಕ್ಸ್ವೆಲ್ ಅವರು ಹೆಂಡತಿಗೆ ಸೀಮಂತ ನೆರವೇರಿಸಿದ್ದಾರೆ. ಪ್ರೀತಿಯ ಉಡುಗೊರೆಗಳನ್ನು ನೀಡಿದ್ದಾರೆ. ಈ ವೇಳೆ ವಿನಿ ಕುಟುಂಬದವರು ಹಾಜರಿದ್ದರು
2022ರ ಮಾರ್ಚ್ 27ರಂದು ಈ ಜೋಡಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಇನ್ನು 2023ರ ಮೇನಲ್ಲಿ ದಂಪತಿ ಪೋಷಕರಾಗುತ್ತಿರುವ ಬಗ್ಗೆ ಘೋಷಿಸಿದ್ದರು. 2022 ರ ಮಾರ್ಚ್ 27 ರಂದು ಚೆನ್ನೈನಲ್ಲಿ ವಿನಿ ಅವರನ್ನು ಮ್ಯಾಕ್ಸ್ವೆಲ್ ವರಿಸಿದ್ದರು.