ನವದೆಹಲಿ, ಆ 04 (DaijiworldNews/MS): ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಪಿ ವಿ ಸಿಂಧು ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಬಿಡಬ್ಲ್ಯೂಎಫ್ 500 ಟೂರ್ನಿ ಯಿಂದ ಹೊರ ಬಿದ್ದಿದ್ದಾರೆ.
ಅಮೆರಿಕದ ಆಟಗಾರ ಬೆಯಿವೆನ್ ಜಾಂಗ್ ವಿರುದ್ಧಇಂದು 21 -12 ಮತ್ತು 21-17 ಅಂತರದಿಂದ ಸೋಲು ಕಂಡಿದ್ದಾರೆ.
2022ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಗಾಯಗೊಂಡಿದ್ದ ಸಿಂಧು ಕಳಪೆ ಫಾರ್ಮಿಗೆ ಸಿಲುಕಿದ್ದಾರೆ. ಇತ್ತೀಚಿನ ಶ್ರೇಯಾಂಕದಲ್ಲಿ 12ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಕುಸಿದಿದ್ದಾರೆ.