ನವದೆಹಲಿ, ಆ 18(DaijiworldNews/MS): ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ ಡೋಪ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ.
ನಿಷೇಧವು ಜನವರಿ 3, 2023 ರಿಂದ ಪ್ರಾರಂಭವಾಗಿದ್ದು, ಮಾದರಿ ಸಂಗ್ರಹಣೆಯ ದಿನಾಂಕದಿಂದ (ಡಿಸೆಂಬರ್ 5, 2022) ದ್ಯುತಿ ಚಂದ್ ಪಡೆದ ಎಲ್ಲಾ ಸ್ಪರ್ಧಾತ್ಮಕ ಫಲಿತಾಂಶಗಳನ್ನು ಅನರ್ಹಗೊಳಿಸಲಾಗುತ್ತದೆ ಮತ್ತು ಅವರು ಗೆದ್ದ ಪದಕಗಳು, ಅಂಕಗಳು ಮತ್ತು ಬಹುಮಾನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಎಲ್ಲಾ ಫಲಿತಾಂಶಗಳೊಂದಿಗೆ ಅನರ್ಹಗೊಳಿಸಲಾಗುತ್ತದೆ ಎಂದು ಟೈಮ್ಸ್ ವರದಿ ಮಾಡಿದೆ.
ಕಳೆದ ವರ್ಷ ಡಿಸೆಂಬರ್ 5ರಂದು ಭುವನೇಶ್ವರದಲ್ಲಿ ದ್ಯುತಿ ಅವರಿಂದ ಪರೀಕ್ಷೆಗಾಗಿ ಮಾದರಿ ಇದರಲ್ಲಿ ಅವರು ಸ್ನಾಯು ಮತ್ತು ಮೂಳೆಗಳ ಬಲವರ್ಧನೆಗಾಗಿ ಈ ಪದಾರ್ಥವನ್ನು ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು ಪತ್ರವೊಂದನ್ನು ಬರೆದು ಎಚ್ಚರಿಕೆಯನ್ನು ನೀಡಿ ತಾತ್ಕಾಲಿಕವಾಗಿ ಅಮಾನತು ಮಾಡಲಾತ್ತು. ಇದೀಗ 4 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.
ಆರಂಭದಲ್ಲಿ ‘ಎ’ ಸ್ಯಾಂಪಲ್ ಪರೀಕ್ಷೆಯ ಬಳಿಕ ಅವರಿಗೆ ‘ಬಿ’ ಸ್ಯಾಂಪಲ್ ಪರೀಕ್ಷೆ ಮಾಡಲಾಗಿದ್ದು ಇದರಲ್ಲಿಯೂ ಅವರು ನಿಷೇಧಿತ ಮದ್ದು ಸೇವನೆ ಮಾಡಿರುವುದು ಸಾಬೀತಾಗಿದೆ. ಹೀಗಾಗಿ ಈ ಶಿಕ್ಷೆ ವಿಧಿಸಲಾಗಿದೆ.
ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆ (ADRV) ಉದ್ದೇಶಪೂರ್ವಕವಲ್ಲ ಎಂದು ಸಾಬೀತುಪಡಿಸುವಲ್ಲಿ ದ್ಯತಿ ವಿಫಲರಾಗಿದ್ದಾರೆ. ಕ್ರೀಡಾಪಟುವು ವೈದ್ಯರನ್ನು ಸಂಪರ್ಕಿಸುವ ಬದಲು ತನ್ನ ಫಿಸಿಯೋಥೆರಪಿಸ್ಟ್ ಸಂಪರ್ಕಿಸಿ ಶಿಫಾರಸು ಮಾಡದ ಔಷಧಿಗಳನ್ನು ಸೇವಿಸಿದ್ದಾರೆ ಎನ್ನಲಾಗಿದೆ.
ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು 26 ವರ್ಷದ ದ್ಯುತಿ ಗೆ 21 ದಿನಗಳ ಅವಕಾಶವಿದೆ.