ಬುಡಾಪೆಸ್ಟ್, ಆ 25 (DaijiworldNews/AK): ಹಂಗೇರಿಯ ಬುಡಾಪೆಸ್ಟ್ ನಲ್ಲಿ ಶುಕ್ರವಾರ ನಡೆದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಆಡುವ ಮೂಲಕ ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ಪ್ರವೇಶಿಸಿರುವ ನೀರಜ್, ಒಲಿಂಪಿಕ್ ಅರ್ಹತೆಯನ್ನೂ ಗಿಟ್ಟಿಸಿಕೊಂಡರು.
ನೀರಜ್ ಚೋಪ್ರಾ ಎ ಗುಂಪಿನ ಅರ್ಹತೆಯಲ್ಲಿ ಅಗ್ರಸ್ಥಾನ ಪಡೆದರು. ಫೈನಲ್ ಗೆ ನೇರ ಅರ್ಹತೆ ಪಡೆಯಲು ಅವರು 83 ಮೀಟರ್ ಜಾವೆಲಿನ್ ಎಸೆಯಬೇಕಿತ್ತು. ಆದರೆ ನೀರಜ್ ಚೋಪ್ರಾ ಅವರು ಮೊದಲ ಪ್ರಯತ್ನದಲ್ಲೇ 88.77 ಮೀಟರ್ ಜಾವೆಲಿನ್ ಎಸೆದರು. ಈ ಮೂಲಕ 83 ಮೀಟರ್ಗಳ ಅರ್ಹತಾ ಮಾರ್ಕ್ ದಾಟಿದ ಏಕೈಕ ಎಸೆತಗಾರದರು.
12 ಜನರು ಫೈನಲ್ ನಲ್ಲಿ ಸ್ಪರ್ಧಿಸಲಿದ್ದು, ಫೈನಲ್ ಪಂದ್ಯ ಭಾನುವಾರ ನಿಗದಿಪಡಿಸಲಾಗಿದೆ.