ನವದೆಹಲಿ, ಸೆ 03 (DaijiworldNews/SM): ಭಾರತ-ಪಾಕಿಸ್ತಾನ ನಡುವೆ ಪಂದ್ಯ ಅಂದರೆ ಅದೊಂತರ ರೋಮಾಂಚನ. ವಿಶ್ವವೇ ಕಣ್ಣೆತ್ತಿ ನೋಡೋದು ಉಭಯ ತಂಡಗಳ ಪೈಪೋಟಿಯನ್ನು. ಈ ಪಂದ್ಯದಲ್ಲಿ ಒಂದಲ್ಲ ಒಂದು ಘಟನೆಗಳು ನಡೆದೇ ನಡೆಯುತ್ತೆ. ಆದರೆ, ಏಷ್ಯಾಕಪ್-2023ರ ಮೊದಲ ಮುಖಾಮುಖಿ ಮಳೆಯಿಂದಾಹುತಿಯಾಗಿದೆ. ಇದೀಗ ಮೈದಾನದಲ್ಲಿ ಆಟಗಾರರ ನಡುವೆ ಸೌಹಾರ್ದಯುತ ವಾತಾವರಣ ಕಂಡು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ.
ಮೈದಾನದಲ್ಲಿ ಯಾವುದೇ ಸ್ನೇಹ ಇರಬಾರದು ಎಂದು ಗೌತಮ್ ಗಂಭೀರ್ ಹೇಳಿದ್ದು ಪಂದ್ಯದ ನಂತರ ಏನೇ ಮಾಡಿದರೂ ಮೈದಾನದಲ್ಲಿ ಪೈಪೋಟಿ ಇರಬೇಕು ಎಂದು ಹೇಳಿದ್ದಾರೆ.
ಏಷ್ಯಾ ಕಪ್ 2023ರಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮೊದಲು, ಭಾರತ ಮತ್ತು ಪಾಕಿಸ್ತಾನದ ಆಟಗಾರರು ಪರಸ್ಪರ ಭೇಟಿಯಾದ ಆಟಗಾರರ ವೀಡಿಯೊ ವೈರಲ್ ಆಗಿತ್ತು. ಮಳೆಯಿಂದಾಗಿ ಪಂದ್ಯ ರದ್ದಾದ ಬಳಿಕವೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪಾಕ್ ಆಟಗಾರರ ಜೊತೆ ಮಾತನಾಡಿದ್ದು ಕಂಡುಬಂದಿತ್ತು.