ಮುಂಬೈ, ಏ 10(SM): ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮತ್ತೊಂದು ಶತಕ ಮೂಡಿ ಬಂದಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಕನ್ನಡಿಗ ಕೆ.ಎಲ್. ರಾಹುಲ್ ಮಿಂಚಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರಂಭಿಕ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಮುಂಬೈ ತಂಡದ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಮೈದಾನಕ್ಕಿಳಿದ ಗೇಲ್ ಹಾಗೂ ರಾಹುಲ್ ಜೋಡಿ ಎದುರಾಳಿ ಬೌಲರ್ಗಳ ಬೆವರಿಳಿಸಿದರು.
ಹೀಗಾಗಿ ಮೊದಲ ವಿಕೆಟ್ನಷ್ಟಕ್ಕೆ 12.5 ಓವರ್ಗಳಲ್ಲೇ 116ರನ್ಗಳನ್ನು ಪೇರಿಸಿತ್ತು. ಈ ವೇಳೆ 63ರನ್ಗಳಿಕೆ ಮಾಡಿದ ಗೇಲ್ ವಿಕೆಟ್ ಒಪ್ಪಿಸಿದರು. ಇನ್ನು ಇತ್ತ ಬ್ಯಾಟಿಂಗ್ನಲ್ಲಿ ತಮ್ಮ ಅಬ್ಬರ ಮುಂದುರೆಸಿದ ರಾಹುಲ್ ಕೇವಲ 64ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 6ಬೌಂಡರಿಗಳ ಸಹಾಯದಿಂದ ಅಜೇಯ 100ರನ್ಗಳಿಕೆ ಮಾಡಿದರು.
ಆ ಮೂಲಕ ಕನ್ನಡಿಗ ರಾಹುಲ್ ಮಿಂಚಿದ್ದು, ಕ್ರೀಡಾಭಿಮಾನಿಗಳಿಗೆ ರಸದೌತನ ನೀಡಿದ್ದಾರೆ.