ಹ್ಯಾಂಗ್ಝೌ, ಅ 04 (DaijiworldNews/MS): ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಆರ್ಚರಿ ತಂಡ ಮಿಶ್ರ ಕಾಂಪೌಂಡ್ ವಿಭಾಗದಲ್ಲಿ ಬಂಗಾರದ ಪದಕಕ್ಕೆ ಗೆದ್ದುಕೊ ಂಡಿದೆ.
ಭಾರತದ ಜ್ಯೋತಿ ಸುರೇಖಾ ವೆನ್ನಂ ಹಾಗೂ ಓಜಸ್ ದೇವತಲೆ ಅವರು ಕೊರಿಯಾದ ಚೇವಾನ್ ಮತ್ತು ಜೂ ಜೇಹೂನ್ ಅವರನ್ನು ಸೋಲಿಸಿ ಚಿನ್ನದ ಪದಕ ಬೇಟೆಯಾಡಿದ್ದಾರೆ. ಸೆಮಿಫೈನಲ್ ನಲ್ಲಿ ಜ್ಯೋತಿ ಸುರೇಖಾ ವೆನ್ನಂ ಹಾಗೂ ಓಜಸ್ ದೇವತಲೆ ಖಜಕಿಸ್ತಾನವನ್ನು ಸೋಲಿಸಿ, ಫೈನಲ್ ಗೆ ಲಗ್ಗೆಯಿಟ್ಟಿತ್ತು.
ಮೊದಲ ಸೆಟ್ ನಲ್ಲಿ ಫರ್ಫಕ್ಟ್ 10 ಗೆ ಗುರಿಯಿಟ್ಟ ಭಾರತದ ಆರ್ಚರಿಗಳು, ಕೊರಿಯಾದಿಂದ ತೀವ್ರ ಪೈಪೋಟಿ ಎದುರಿಸಿತು. ಅಂತಿಮವಾಗಿ ಭಾರತ 159 ಅಂಕಗಳನ್ನು ಪಡದರೆ, ಕೊರಿಯಾ 158 ಅಂಕಗಳನ್ನು ಪಡೆದು ಬೆಳ್ಳಿ ಪದಕವನ್ನು ತನ್ನದಾಗಿಸಿತು.