ಹ್ಯಾಂಗ್ಝೌ, ಅ 05 (DaijiworldNews/MS): ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ. 12 ನೇ ದಿನವಾದ ಇಂದು ಮತ್ತೊಂದು ಬಂಗಾರದ ಪದಕ ಗೆದ್ದುಕೊಂಡಿದೆ.
ಆರ್ಚರಿ ಮಹಿಳೆಯರ ಕಾಂಪೌಂಡ್ ತಂಡ ವಿಭಾಗದಲ್ಲಿ ಜ್ಯೋತಿ ಸುರೇಖಾ ವೆನ್ನಮ್, ಪರ್ಣೀತ್ ಕೌರ್ ಮತ್ತು ಅದಿತಿ ಸ್ವಾಮಿ ಸ್ವರ್ಣಕ್ಕೆ ಗುರಿಯಿಟ್ಟರು.
ನಿರ್ಣಾಯಕ ಕದನದಲ್ಲಿ ಭಾರತದ ಆರ್ಚರ್ಗಳು ಭರ್ಜರಿ ಹೋರಾಟ ಪ್ರದರ್ಶಿಸಿ ಚಿನ್ನದ ಪದಕ ಗೆಲ್ಲಲು ಕಾರಣವಾದರು. ಭಾರೀ ರೋಚಕತೆಯಿಂದ ಕೂಡಿದ ಚೈನೀಸ್ ತೈಪೆ ವಿರುದ್ಧದ ಫೈನಲ್ನಲ್ಲಿ ಭಾರತೀಯ ನಾರಿಯರು 230-228 ಅಂಕಗಳಿಂದ ಗೆದ್ದರು.
19 ಚಿನ್ನ, 31 ಬೆಳ್ಳಿ ಮತ್ತು 32 ಕಂಚಿನ ಪದಕಗಳೊಂದಿಗೆ ಭಾರತ ಒಟ್ಟು 82 ಪದಕ ಜಯಿಸಿದ್ದು, 4ನೇ ಸ್ಥನದಲ್ಲಿ ಮುಂದುವರೆದಿದೆ.