ಹ್ಯಾಂಗ್ ಝೂ,ಅ 06 (DaijiworldNews/AK): ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಇಂದು ನಡೆದ ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು 5-1 ಅಂತರದಿಂದ ಗೆದ್ದು ಚಿನ್ನ ಪದಕ ಮುಡಿಗೇರಿಸಿಕೊಂಡಿದೆ.
ಭಾರತ ಈಗಾಗಲೇ 95 ಪದಕಗಳನ್ನು ಗೆದ್ದಿದ್ದು, ಉಳಿದ ಐದು ಪದಕಗಳು ಖಚಿತವಾಗಿವೆ.ಇದೇ ಮೊದಲು ಏಷ್ಯನ್ ಗೇಮ್ಸ್ ನಲ್ಲಿ ಭಾರತವು 100 ಪದಕಗಳ ಗಡಿ ದಾಟುತ್ತಿರುವುದು.
ಜಪಾನ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಆಟಗಾರ ಮನ್ ಪ್ರೀತ್ ಸಿಂಗ್ ಅವರು ಮೊದಲ ಗೋಲು ಹೊಡೆದರು.
32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಸಿಂಗ್ ಮತ್ತು 36ನೇ ನಿಮಿಷದಲ್ಲಿ ರೋಹಿತ್ ದಾಸ್ ಗೋಲು ಹೊಡೆದರು.
ಕೊನೆಯ ಕ್ಷಣದಲ್ಲಿ ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರು ಗೋಲು ಬಾರಿಸಿದರು.ಈ ಮೂಲಕ ಭಾರತ 5-1 ಅಂತರದಿಂದ ಜಯಭೇರಿ ಬಾರಿಸಿತ್ತು.ಇದರೊಂದಿಗೆ ಪ್ಯಾರಿಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಿತು.