ಪಂಜಾಬ್, ಏ 13(SM): ಮೊಹಾಲಿಯಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯವನ್ನು ಗೆಲ್ಲುವ ಮೂಲಕ ಆರ್ ಸಿಬಿ ತಂಡ ಮಾನ ಉಳಿಸಿಕೊಂಡಿದೆ. ನಿರಂತರ 6 ಪಂದ್ಯಗಳಲ್ಲಿ ಸೋಲನುಭವಿಸಿದ್ದ ಬೆಂಗಳೂರು ತಂಡ 7ನೇ ಪಂದ್ಯದಲ್ಲಿ 8 ವಿಕೆಟ್ ಗೆಲುವು ದಾಖಲಿಕೊಂಡಿದೆ.
7ನೇ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಆರ್ ಸಿಬಿ ತಂಡ ತನ್ನ ಸೋಲಿನ ಓಟಕ್ಕೆ ಬ್ರೇಕ್ ಹಾಕಿದೆ. ಅಲ್ಲದೆ ತಂಡದ ಮಾನವನ್ನು ಉಳಿಸಿಕೊಂಡಿದೆ. ಒಂದೊಮ್ಮೆ 7ನೇ ಪಂದ್ಯವನ್ನು ಕೈಚೆಲ್ಲಿದ್ದರೆ, ನಿರಂತರ 7 ಪಂದ್ಯಗಳಲ್ಲಿ ಸೋಲು ಎಂಬ ದಾಖಲೆ ಆರ್ ಸಿಬಿ ಪಾಲಾಗುತ್ತಿತ್ತು. ಆದರೆ, ಪಂಜಾಬ್ ವಿರುದ್ಧದ ಪಂದ್ಯದಲ್ಲಿ ತೊಡೆತಟ್ಟಿ ನಿಂತ ಕೊಹ್ಲಿ ಬಾಯ್ಸ್, ಎದುರಾಳಿಗಳಿಗೆ ದಿಟ್ಟ ಉತ್ತರವನ್ನೇ ನೀಡಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಒಂದಿಷ್ಟು ನಿಟ್ಟುಸಿರುವ ಬಿಡುವಂತೆ ಮಾಡಿದ್ದಾರೆ. ಆರ್ ಸಿಬಿ ಗೆಲುವು ಅಭಿಮಾನಿಗಳಿಗೆ ಸಿಹಿತುಪ್ಪವಾಗಿದೆ.
ನಿರಂತರ ಸೋಲುಗಳ ಬಳಿಕ ಈ ಪಂದ್ಯ ಗೆದ್ದಿರುವುದು ತಂಡದ ಸದಸ್ಯರಲ್ಲಿ ಹೊಸ ಹುರುಪನ್ನು ಮೂಡಿಸಿದ್ದು, ಮುಂದಿನ ಪಂದ್ಯಗಳಲ್ಲಿ ಒಂದಿಷ್ಟು ನಿರೀಕ್ಷೆ ಉಳಿಸಿಕೊಂಡಿದೆ.
ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಪಂಜಾಬ್ ತಂಡ, ನಿಗಧಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳನ್ನು ಪೇರಿಸಿತು. ಪಂಜಾಬ್ ಪರ ಅಬ್ಬರಿಸಿದ ಕ್ರಿಸ್ ಗೇಲ್ 64 ಎಸೆತಗಳಲ್ಲಿ 99 ರನ್ ಗಳನ್ನು ಸಿಡಿಸಿ ಅಜೇಯರಾಗಿ ಉಳಿದರು.
ಪಂಜಾಬ್ ನೀಡಿದ್ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್ ಸಿಬಿ 19.2 ಓವರ್ ಗಳಲ್ಲಿ 2 ವಿಕೆಟ್ ಗಳ ನಷ್ಟಕ್ಕೆ 174 ರನ್ ಗಳನ್ನು ಗಳಿಸುವ ಮೂಲಕ ವಿಜಯದ ನಗೆ ಚೆಲ್ಲಿತು. ಆರ್ ಸಿಬಿ ಪರ ಕೊಹ್ಲಿ 67 ರನ್ ಗಳನ್ನು ಸಿಡಿಸಿದರೆ, ಎಬಿಡಿ 59 ರನ್ ಗಳನ್ನು ಪೇರಿಸಿದರು.