ಪುಣೆ, ಅ.19 (DaijiworldNews/AK/MR): ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 2015 ರ ಬಳಿಕ ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದಾರೆ.
ಪುಣೆಯಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದ 9ನೇ ಓವರ್ನಲ್ಲಿ ಕೊಹ್ಲಿ ಕೊನೆಯ 3 ಎಸೆತಗಳ ಜವಾಬ್ದಾರಿ ತೆಗೆದುಕೊಂಡರು.
ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಮೊದಲ ಓವರ್ ಬೌಲಿಂಗ್ ಮಾಡುವಾಗ ಗಾಯಕ್ಕೆ ಒಳಗಾದರು. ಈ ಹಿನ್ನೆಲೆಯಲ್ಲಿ ಓವರ್ ನಲ್ಲಿ ಉಳಿದ 3 ಎಸೆತಗಳ ಜವಾಬ್ದಾರಿಯನ್ನು ಕೊಹ್ಲಿ ವಹಿಸಿಕೊಂಡರು.ಮೂರು ಎಸೆತಗಳಲ್ಲಿ ಕೊಹ್ಲಿ 2 ರನ್ ನೀಡಿದರು.
ವಿರಾಟ್ ಕೊಹ್ಲಿ 2015ರ ವಿಶ್ವಕಪ್ ಪಂದ್ಯದಲ್ಲಿ ಕೊನೆಯ ಬಾರಿಗೆ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಓವರ್ ನಲ್ಲಿ ಬೌಲಿಂಗ್ ಮಾಡಿದ್ದರು. ಆ ಸಂದರ್ಭದಲ್ಲಿ ತಂಡದ ನಾಯಕ ಎಂಎಸ್ ಧೋನಿ ವಿರಾಟ್ ಗೆ ಈ ಜವಾಬ್ದಾರಿ ವಹಿಸಿದ್ದರು.
ವಿರಾಟ್ ಕೊಹ್ಲಿ ಗುರುವಾರ ಸುಮಾರು 105 kmph ವೇಗದಲ್ಲ ಬೌಲಿಂಗ್ ಮಾಡುವ ಮೂಲಕ ತಮ್ಮ ಪ್ರಭಾವ ಶಾಲಿ ನಿಯಂತ್ರಣವನ್ನು ಪ್ರದರ್ಶಿಸಿದರು.
ಈ ಬೌಲಿಂಗ್ ನಲ್ಲಿ ಬಾಂಗ್ಲಾದೇಶದ ತಂಝಿದ್ ಹಸನ್ ಮತ್ತು ಲಿಟ್ಟನ್ ದಾಸ್ ತಲಾ ಒಂದು ರನ್ ಗಳಿಸುವಲ್ಲಿ ಯಶಸ್ವಿಯಾದರು.