ಹಿಮಾಚಲ ಪ್ರದೇಶ,ಅ 23 (DaijiworldNews/AK/MR): ನ್ಯೂಜಿಲೆಂಡ್ ವಿರುದ್ದ 2023ರ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾದ ಮೊಹಮ್ಮದ್ ಶಮಿ ದಾಖಲೆ ನಿರ್ಮಿಸಿದ್ದಾರೆ.
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 4 ಪಂದ್ಯಗಳ ಬಳಿಕ ಭಾರತದ ವಿಶ್ವಕಪ್ ಟೂರ್ನಿಗೆ ಸೇರ್ಪಡೆಗೊಂಡ ಶಮಿ, ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿಯುವ ಮೂಲಕ ವಿಶ್ವಕಪ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ 3ನೇ ಬೌಲರ್ ಎನಿಸಿಕೊಂಡಿದ್ದಾರೆ.
ಪಂದ್ಯದ ಸಮಯದಲ್ಲಿ, ಶಮಿ ತನ್ನ 2 ನೇ ಓವರ್ ಬೌಲ್ ಮಾಡಿದರು ಮತ್ತು ನ್ಯೂಜಿಲೆಂಡ್ ಓಪನರ್ ವಿಲ್ ಯಂಗ್ ಅವರನ್ನು ತಮ್ಮ ಮೊದಲ ಎಸೆತದಲ್ಲಿ ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದರು.
ಕರ್ನಾಟಕದ ಆಟಗಾರ ಅನಿಲ್ ಕುಂಬ್ಳೆ 18 ಇನ್ನಿಂಗ್ಸ್ ಗಳಲ್ಲಿ 31 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದರೂ, ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಶಮಿ 12 ಇನ್ನಿಂಗ್ಸ್ ಗಳಲ್ಲಿ 32 ವಿಕೆಟ್ ಕಬಳಿಸಿದರು. ಅಲ್ಲದೇ 18 ಇನ್ನಿಂಗ್ಸ್ ಗಳಲ್ಲಿ 31 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ.
ಜಸ್ಪ್ರೀತ್ ಬುಮ್ರಾ 14 ಇನ್ನಿಂಗ್ಸ್ಗಳಲ್ಲಿ 28 ವಿಕೆಟ್ಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ. 4 ವಿಕೆಟ್ ಪಡೆದರೆ ಕುಂಬ್ಳೆ ಅವರನ್ನು ಮೀರಿಸುತ್ತಾರೆ. ಈ ವಿಶ್ವಕಪ್ ಟೂರ್ನಿಯ ಅಂತ್ಯದ ವೇಳೆಗೆ ಬುಮ್ರಾ ಕೂಡ ಕುಂಬ್ಳೆ ಅವರನ್ನು ಹಿಂದಿಕ್ಕಲಿದ್ದಾರೆ ಎಂದು ಅಭಿಮಾನಿಗಳ ಅಭಿಪ್ರಾಯ.