ಕೋಲ್ಕತ್ತಾ,ನ 6 (DaijiworldNews/AK): ವಿರಾಟ್ ಕೊಹ್ಲಿ ಅವರ 35ನೇ ಹುಟ್ಟುಹಬ್ಬಕ್ಕೆ ಬೆಂಗಾಲ್ ಕ್ರಿಕೆಟ್ ಮಂಡಳಿ ಚಿನ್ನದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದೆ.
ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ಸಹೋದರ, ಸಿಎಬಿ ಮಂಡಳಿಯ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಅವರು ಕೊಹ್ಲಿಗೆ ಉಡುಗೊರೆಯನ್ನು ಹಸ್ತಾಂತರ ಮಾಡಿದರು. ಈ ಚಿನ್ನದ ಬ್ಯಾಟಿನ ಮೇಲೆ ಹ್ಯಾಪಿ ಬರ್ತ್ ಡೇ ವಿರಾಟ್ ಎಂದು ಬರೆದು ವಿಶ್ ಮಾಡಲಾಗಿದೆ.ಅಲ್ಲದೇ ನೀವು ಸಮರ್ಪಣೆಯ ಸಂಕೇತವಾಗಿದ್ದೀರಿ. ವಯಸ್ಸು ಕೇವಲ ನಂಬರ್ ಅಷ್ಟೇ ಎಂಬುದನ್ನು ನೀವು ಪ್ರೂವ್ ಮಾಡಿದ್ದೀರಿ ಎಂದು ಬರೆಯಲಾಗಿದೆ.
ಭಾನುವಾರ ನಡೆದ ದಕ್ಷಿಣ ಆಫ್ರಿಕಾದ ವಿರುದ್ಧ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಕೊಹ್ಲಿ 49 ಶತಕ ಸಿಡಿಸುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ್ದರು.
ಅಲ್ಲದೇ ಈ ಕುರಿತು ವಿರಾಟ್ ಪ್ರತಿಕ್ರಿಯಿಸಿದ್ದು, ನಾನು ತೆಂಡೂಲ್ಕರ್ ಬ್ಯಾಟಿಂಗ್ ನೋಡುತ್ತಾ ಬೆಳೆದಿದ್ದೇನೆ. ಅವರ ಬ್ಯಾಟಿಂಗ್ ಶೈಲಿ ಅತ್ಯುತ್ತಮವಾದದ್ದು. ನಾನು ಆ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಏನೇ ಆದರೂ ಸಚಿನ್ ನನ್ನ ನಾಯಕರಾಗಿರುತ್ತಾರೆ ಎಂದು ಹೇಳಿದರು.