ಕೋಲ್ಕತ್ತಾ, ನ 08 (DaijiworldNews/MR): ಐಸಿಸಿ World Cupನಲ್ಲಿ ಭಾರತದ ಮೊದಲ ಮೂರು ಪಂದ್ಯಗಳಲ್ಲಿ ಸ್ಥಾನ ಪಡೆಯದ ಶಮಿ ಕೇವಲ 4 ಪಂದ್ಯಗಳಲ್ಲಿ 16 ವಿಕೆಟ್ಗಳನ್ನು ಪಡೆದಿದ್ದಾರೆ. ಶಮಿ ಅವರ ಈ ಅಸಾಧಾರಣ ಪ್ರದರ್ಶನದ ಬಗ್ಗೆ ಇಡೀ ಕ್ರಿಕೆಟ್ ಕ್ಷೇತ್ರವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ ಅವರ ಮಾಜಿ ಪತ್ನಿ ಹಸೀನ್ ಜಹಾನ್ ತಮ್ಮ ಪತಿಯ ಯಶಸ್ಸಿನ ಬಗ್ಗೆ ವಿಚಿತ್ರ ಹೇಳಿಕೆ ನೀಡಿದ್ದಾರೆ.
ನ್ಯೂಸ್ ನೇಷನ್ಗೆ ನೀಡಿದ ಸಂದರ್ಶನದಲ್ಲಿ, ಹಸೀನ್ ಜಹಾನ್ ಅವರಿಗೆ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿ ಶಮಿ ಮತ್ತು ಟೀಮ್ ಇಂಡಿಯಾದ ಯಶಸ್ಸಿನ ಬಗ್ಗೆ ಪ್ರಶ್ನಿಸಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿರುವ ಹಸೀನ್ ಆರಂಭದಲ್ಲಿ ಜಹಾನ್ ಅವರು ಕ್ರಿಕೆಟ್ ಮತ್ತು ಕ್ರಿಕೆಟಿಗರ ಅಭಿಮಾನಿಯಲ್ಲ ಎಂದು ಹೇಳಿಕೊಂಡರು. ನಂತರ ಶಮಿ ಉತ್ತಮ ಪ್ರದರ್ಶನ ನೀಡಿದರೆ, ಭಾರತೀಯ ತಂಡದಲ್ಲಿ ಉಳಿಯುತ್ತಾರೆ. ಅವರು ಉತ್ತಮವಾಗಿ ಸಂಪಾದಿಸುತ್ತಾರೆ. ಅದು ಕುಟುಂಬದ ಭವಿಷ್ಯಕ್ಕೆ ಒಳ್ಳೆಯದು ಎಂದು ವಿಭಿನ್ನ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ.
ವಾಸ್ತವವಾಗಿ ಮೊಹಮ್ಮದ್ ಶಮಿ ಹಾಗೂ ಮಡದಿ ಹಸಿನ್ ಜಹಾನ್ ವೈವಾಹಿಕ ಜೀವನದಲ್ಲಿ ಬಿರುಕು ಬಿಟ್ಟಿದೆ. ಹಸೀನ್ ಜಹಾನ್ ಮತ್ತು ಮೊಹಮ್ಮದ್ ಶಮಿ ಜೂನ್ 6, 2014ರಂದು ವಿವಾಹವಾದರು, ಮಾರ್ಚ್ 8, 2018ರಂದು, ಜಹಾನ್ ತನ್ನ ಪತಿಯ ವಿರುದ್ಧ ಬೆದರಿಕೆ, ದ್ರೋಹ ಮತ್ತು ವರದಕ್ಷಿಣೆ ಬೇಡಿಕೆಯ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದರು.
ದಂಪತಿಗಳಿಬ್ಬರು 2018 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ವಿಚ್ಛೇದಿತ ಪತ್ನಿಗೆ ಮಾಸಿಕ 1,30,000 ರೂ.ಗಳ ಜೀವನಾಂಶವನ್ನು ಪಾವತಿಸುವಂತೆ ಕೋಲ್ಕತಾ ನ್ಯಾಯಾಲಯವು ಮೊಹಮ್ಮದ್ ಶಮಿಗೆ ಆದೇಶಿಸಿದೆ.