ಮುಂಬೈ, ನ 09 (DaijiworldNews/MS): ಪ್ರಸಕ್ತ ವರ್ಷದಲ್ಲಿ ಅತ್ಯಂತ ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ಯುವ ಆಟಗಾರ ಶುಭಮನ್ ಗಿಲ್ ಐಸಿಸಿ ಒಡಿಐ ಶ್ರೇಯಾಂಕದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಆಝಮ್ ಅವರನ್ನು ಹಿಂದಕ್ಕಿ ಅಗ್ರ ಸ್ಥಾನಕ್ಕೇರಿದ್ದಾರೆ.
ಇದೇ ವಿಚಾರವಾಗಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರು ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಒಂದು ಈಗ ಬಾರಿ ಸದ್ದು ಮಾಡುತ್ತಿದೆ
ಜ್ವರದಿಂದಿಂದಾಗಿ ಭಾರತ ತಂಡದ ಪರ ಟೂರ್ನಿಯ ಮೊದಲೆರಡು ಪಂದ್ಯ ಗಳಿಗೆ ಅಲಭ್ಯರಾಗಿದ್ದ ಗಿಲ್, ಇದೀಗ ನಾಯಕ ರೋಹಿತ್ ಶರ್ಮಾ ಜೊತೆಗೂಡಿ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಅವರು ದಿಗ್ಗಜ ಕ್ರಿ ಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ
ಹೀಗಾಗಿ ಗಿಲ್ ಅವರ ಪ್ರೇಯಸಿ ಎಂದು ಹೇಳಲಾಗುತ್ತಿರುವ ಸಾರ ತೆಂಡೂಲ್ಕರ್ ಅವರು ತಮ್ಮ ಟ್ವೀಟರ್ ಎಕ್ಸ್ ಖಾತೆಯಲ್ಲಿ ‘ವಿಶ್ವದ ನಂ.1 ಬ್ಯಾಟರ್, ಶುಭಮನ್ ಗಿಲ್’ ಎಂದು ಬರೆದು ಹಾರ್ಟ್ ಮತ್ತು ಲವ್ ಸಿಂಬಲ್ನ ಎಮೋಜಿಯನ್ನು ಹಾಕಿದ್ದಾರೆ.