ಮುಂಬೈ, ನ 15 (DaijiworldNews/PC):ಸರದಿ ದಾಖಲೆ ನಿರ್ಮಿಸುತ್ತಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ನಲ್ಲಿ ಕ್ರಿಕೆಟ್ ದೇವರೆಂದೇ ಕರೆಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನೇ ಮುರಿದಿದ್ದಾರೆ.
673 ರನ್ ಸಿಡಿಸುವ ಮೂಲಕ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತಿಹೆಚ್ಚು ರನ್ ದಾಖಲಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2003ರಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಫೈನಲ್ನಲ್ಲಿ ಸೋತರೂ ಸಚಿನ್ ಅವರ ಅತ್ಯುತ್ತಮ ಆಟಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ಸಿಕ್ಕಿತ್ತು.
ಈ ಸಾಧನೆ ನಿರ್ಮಿಸಿ 20 ವರ್ಷ ಕಳೆದರೂ ಈ ದಾಖಲೆ ಯಲ್ಲಿ ಸಚಿನ್ ಹೆಸರಿನಲ್ಲೇ ಇತ್ತು.ಸಚಿನ್ 11 ಪಂದ್ಯಗಳಿಂದ ಈ ದಾಖಲೆ ನಿರ್ಮಿಸಿದ್ದರೆ ಕೊಹ್ಲಿ 10 ಪಂದ್ಯಗಳಿಂದ 700 ರನ್ಗಳ ಗಡಿಯನ್ನು ದಾಟಿದ್ದಾರೆ. ಈ ಮೂಲಕ ವಿರಾಟ್ ತಮ್ಮ ವಿರಾಟವನ್ನು ತೋರಿಸಿದ್ದಾರೆ.