ಮುಂಬೈ, ನ 16 (DaijiworldNews/AK): ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ 70 ರನ್ ಗಳ ಜಯಭೇರಿ ಬಾರಿಸಿದೆ.
ಮುಹಮ್ಮದ್ ಶಮಿ ಭರ್ಜರಿ ಬೌಲಿಂಗ್ ದಾಳಿ ಹಾಗೂ ವಿರಾಟ್ ಮತ್ತು ಶ್ರೇಯಸ್ ಅಮೋಘ ಶತಕದ ನೆರವಿನಿಂದ ಭಾರತ ಫೈನಲ್ ಪ್ರವೇಶಿಸಿದೆ.
ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 50 ಓವರ್ಗಳಲ್ಲಿ 397 ರನ್ ಕಲೆಹಾಕಿತ್ತು. 398 ರನ್ಗಳ ಗುರಿ ಬೆನ್ನತ್ತಿದ್ದ ಕಿವೀಸ್ 48.5 ಓವರ್ಗಳಲ್ಲೇ 327 ರನ್ ಗಳಿಗೆ ಅಲ್ ಔಟ್ ಆಯಿತು. ಇದರಿಂದ ಟೀಂ ಇಂಡಿಯಾ ಸತತ 10ನೇ ಜಯದೊಂದಿಗೆ ಫೈನಲ್ ಪ್ರವೇಶಿಸಿತು.ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿಲಿಯಮ್ಸನ್ 69 ರನ್ ಗಳಿಸಿ ಶಮಿ ಎಸೆತದಲ್ಲಿ ವಿಕೆಟ್ ನೀಡಿದರು.
ಡರೆಲ್ ಮಿಚೆಲ್ 119 ಎಸೆತಗಳಲ್ಲಿ 9 ಬೌಂಡರಿ 7 ಸಿಕ್ಸರ್ ನೀಡುವ ಮೂಲಕ ಬ್ಯಾಟಿಂಗ್ ಮುಂದುವರಿಸಿ ಕಿವೀಸ್ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಆದರೆ ಶಮಿ ಬೌಲಿಂಗ್ ನಲ್ಲಿ ಜಡೇಜಾಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿಕೊಂಡರು.